ಭಾರತೀಯರಿಂದ ಭಾರತೀಯರಿಗಾಗಿಯೇ ಸೇವೆ ಸಲ್ಲಿಸುವ ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆಯಾಗಿದೆ ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಹೇಳಿದರು.
ಮಂಡ್ಯನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ನ್ಯಾಷನಲ್ ಜಿಲ್ಲೆ ಮಂಡ್ಯ ಆಯೋಜಿಸಿದ್ದ ಭಾರತೀಯ ಸೇನಾ ದಿನ ಮತ್ತು ರಾಷ್ಟ್ರೀಯ ರೈತರ ದಿನ ಪ್ರಯುಕ್ತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲಯನ್ಸ್ ಸಂಸ್ಥೆಯ ಮುಖ್ಯ ದ್ಯೇಯ ಕ್ಯಾನ್ಸರ್ ನಿರ್ಮೂಲನೆಗೆ ಆದ್ಯತೆ, ಅಗತ್ಯಯುಳ್ಳವರಿಗೆ ನೆರವು ಇದರೊಟ್ಟಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳಲ್ಲಿ ತನ್ನದೇ ಆದ ಸೇವಾಚಟುವಟಕೆಗಳನ್ನು ರೂಪಿಸುವುದಾಗಿದೆ ಎಂದು ನುಡಿದರು. ಪ್ರಪಂಚದ ಅನೇಕ ರಾ ಷ್ಟçಗಳಲ್ಲಿ ಅಲಯನ್ಸ್ ಸಂಸ್ಥೆಯ ಶಾಖೆಗಳು ಇದ್ದು, ಲಕ್ಷಾಂತರ ಮಂದಿ ಸದಸ್ಯರು ವಿವಿಧ ಸೇವಾಕಾರ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಅನ್ನಕೊಡುವ ರೈತರು ಮತ್ತು ಜೀವಕಾಯುವ ಸೈನಿಕರು ದೇಶದ ಎರಡು ಕಣ್ಣುಗಳಿದ್ದಾಗೆ, ಇವರಿಬ್ಬರೂ ದೇಶದ ಸಂಪತ್ತು, ನಿಜವಾದ ಹೀರೋಗಳು ಅಂದರೆ ರೈತರು ಮತ್ತು ಸೈನಿಕರು ಎಂದು ಹೇಳಿದರು.
ಭಾರತೀಯ ಸೇನೆಯನ್ನು ಏ.೧.೧೮೯೫ರಂದು ಸ್ಥಾಪಿಸಲಾಯಿತು. ಮೊದಲ ಸೇನಾ ಮುಖ್ಯಸ್ಥರನ್ನು ೧೯೪೯ರಲ್ಲಿ ಪಡೆದುಕೊಂಡಿತು. ೧೫ ಜನವರಿ ೧೯೪೯ ರಂದು ಫೀಲ್ಡ್ ಮಾರ್ಷಲ್ ಏ.ಒ ಕಾರಿಯಪ್ಪ ಅವರು ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಅನ್ನು ವಹಿಸಿಕೊಂಡರು ಎಂದು ಸ್ಮರಿಸಿದರು.
ಭಾರತದ ಸುಮಾರು ಶೇ.೬೦ರಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಪ್ರತಿ ರೈತನನ್ನು ಗೌರವಿಸುವ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಅವರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ, ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರನ್ನು ನೆನಪಸಿಕೊಳ್ಳುವ ದಿನವಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕೆ.ಮೂರ್ತಿ, ಸುಬ್ರಹ್ಮಣ್ಯ, ಎಂ.ರಮೇಶ್, ಆದರ್ಶ ಕೃಷಿಕ ಕೆ.ಎಸ್.ಸೋಮಶೇಖರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅನಿಕೇತನ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಡಾ. ರಾಮಲಿಂಗಯ್ಯ, ಅಲಯನ್ಸ್ ಸಂಸ್ಥೆಯ ೧ನೇ ಜಿಲ್ಲಾ ಉಪ ರಾಜ್ಯಪಾಲ ಮಾದೇಗೌಡ, ನಿವೃತ್ತ ಪ್ರಾಂಶುಪಾಲ ಎಚ್.ಅನಿಲ್ ಕುಮಾರ್, ಸಂಪುಟ ಖಜಾಂಚಿ ರಕ್ಷಿತ್ರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್ ಸೇರಿದಂತೆ ಹಲವರು ಹಾಜರಿದ್ದರು.




