ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಇಂಡುವಾಳು ಗ್ರಾಮ ಪಂಚಾಯಿತಿ ಕಾರ್ಯಾಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು.ಈ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನದಿಂದ ನೂತನ ಕಟ್ಟಡ ನಿರ್ಮಿಸಿರುವುದು ಸಂತೋಷ ತಂದಿದೆ.ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದರು.
ಇಂಡುವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎನ್.ತೇಜ ತ್ರಿಲೋಕ್ (ಗೌಡಪ್ಪ) ಮಾತನಾಡಿ, ಇಂಡುವಾಳು ಗ್ರಾಮ ಪಂಚಾಯಿತಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು ಇದೀಗ 75 ಲಕ್ಷ ರೂ.ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಸಿ.ಯೋಗೇಶ್ ಮಾತನಾಡಿ, ಇಂಡುವಾಳು ಗ್ರಾಮ ಪಂಚಾಯಿತಿ ಕಟ್ಟಡ ರಾಷ್ಟ್ರೀಯ ಹೆದ್ದಾರಿಗೆ ರಸ್ತೆ ಅಗಲೀಕರಣ ಆದಾಗ ತೆರವಾಗಿತ್ತು. ಕಳೆದ ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಪಂಚಾಯಿತಿ ಕೆಲಸಗಳು ನಡೆಯುತಿತ್ತು. ಭೂಮಿ ಅಗಲೀಕರಣದಿಂದ ಬಂದ ಹಣದಿಂದ 75 ಲಕ್ಷ ರೂ.ವೆಚ್ಚದಲ್ಲಿ ಕೆಆರ್ ಐಡಿಎಲ್ ವತಿಯಿಂದ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಉದ್ಘಾಟಿಸಿರುವುದು ಹೆಮ್ಮೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಇಂಡುವಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಸತೀಶ (ಸತ್ಯ), ಸದಸ್ಯರುಗಳಾದ ಎಸ್. ತನುಜ ಎಸ್. ಸ್ವಾಮಿ, ಮುನಿಸ್ವಾಮಿ,ಚನ್ನಚಾರಿ, ಟಿ.ಎಸ್.ಅಭಿಲಾಷ ರಘು.,ಬಿ.ರೇಖಾ ಪ್ರಸನ್ನಕುಮಾರ್, ಎಸ್.ಮಮತ ಆನಂದ.ಎಸ್ ಹೆಚ್. ರಾಚಮ್ಮ ರಾಮಲಿಂಗಯ್ಯ, ತನುಜ ಸುಂದರ್ ರಮೇಶ (ಸೊಸೈಟಿ) ಡಿ.ಎನ್.ಸವಿತ ಸತೀಶ್ ಎಸ್.ಬಿ.ಚಲುವರಾಜು, ಶೈಲಜ ಸೋಮಶೇಖರ, ಎಸ್.ಪಿ.ರಮೇಶರಾಜು, ಕೆ.ಸಿ.ಚಂದ್ರು, ಕೆ.ಎಂ.ಚಿಕ್ಕಯ್ಯ, ಲಕ್ಷ್ಮಿ, ಶಂಕರ, ಮುಖಂಡರಾದ ನಿತ್ಯಾನಂದ,ಗುತ್ತಿಗೆದಾರ ಮನೋಹರ್ ಸೇರಿದಂತೆ ಇತರರಿದ್ದರು.




