ಮಂಡ್ಯನಗರದ ನೂರಡಿ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡಲು ರಾಜ್ಯ ಒಕ್ಕಲಿಗರ ನಿರ್ದೇಶಕ ಅಶೋಕ್ ಜಯರಾಮ್ ನೇತೃತ್ವದಲ್ಲಿ ಹಲವರು ನಗರಸಭೆ ಅಧ್ಯಕ್ಷ ನಾಗೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ಮಂಡ್ಯದಲ್ಲಿ ನಾಡಪ್ರಭು ಕೆಂಪೇಗೌಡರ ಭವನ ನಿರ್ಮಿಸಬೇಕು. ಹಾಗೇಯೇ ನೂರಡಿ ರಸ್ತೆಗೆ ಕೆಂಪೇಗೌಡರ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಕೆಂಪೇಗೌಡರ ಹೆಸರು ನೂರಡಿ ರಸ್ತೆಗೆ ನಾಮಕರಣ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದು ಅಶೋಕ್ ಜಯರಾಮ್ ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ, ವಂಸತ್ ಕುಮಾರ್, ಗ್ರಾ.ಪ.ಸದಸ್ಯ ಅನಿಲ್ ಕುಮಾರ್ ಸುಜಾತಾಕೃಷ್ಣ, ಪೂಜಾ ಶಾಮಿಯಾನ ರಮೇಶ್, ನಗರಸಭಾ ಮಾಜಿ ಸದಸ್ಯ ರವೀಂದ್ರ ಸೇರಿದಂತೆ ಮತ್ತಿತರರಿದ್ದರು.




