ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಶೇ.15 ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಮಸೂದೆಯನ್ನು ರಾಜ್ಯಪಾಲರು ಕಾರಣ ಕೇಳಿ ವಾಪಸ್ ಕಳಿಸಿರುವುದು ಹಲವು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ ಜೆಡಿಎಸ್ ಮುಖಂಡರು ಮತ್ತೊಂದು ವಿಧೇಯಕವಾದ ದ್ವೇಷದ ಭಾಷಣ ಬಿಲ್ ಅನ್ನು ತಡೆಯಲು ಮನವಿ ಸಲ್ಲಿಸಿದರು. ಅದನ್ನೇ ನೆಪ ಮಾಡಿಕೊಂಡು, ಒಳಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ ಎಂಬ ಅನುಮಾನ ಬರುತ್ತದೆ. ಹಾಗಾಗಿ ರಾಜ್ಯಪಾಲರು ಬಿಜೆಪಿ, ಜೆಡಿಎಸ್ ಏಜೇಂಟರಂತೆ ಕಾರ್ಯ ನಿರ್ವಹಿಸದೇ ಸಂವಿಧಾನ ಆಶಯದಂತೆ ಕಾನೂನು ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗಾಗಿ ಹೊರಡಿಸಿದ್ದ ಕಾನೂನಿಗೆ ರಾಜ್ಯಪಾಲರು ಕೇಳಿರುವ ಸ್ಪಷ್ಟೀಕರಣ ನೀಡಿ, ಮತ್ತೇ ರಾಜ್ಯಪಾಲರಿಗೆ ಕಳುಹಿಸ ಬೇಕು ಎಂದು ಒತ್ತಾಯಿಸಿದರುವ ಅವರು, ಮುಂದಿನ ZP, TP ,ಪುರಸಭೆಗಳ ಚುನಾವಣೆಯಲ್ಲಿ, ಬಿಜೆಪಿ, ಜೆಡಿಎಸ್,ಕಾಂಗ್ರೆಸ್ ಪಕ್ಷಗಳಿಗೆ ಒಳಮೀಸಲಾತಿ ವಿಷಯವನ್ನು ರಾಜಕೀಯ ದಾಳ ಮಾಡಿಕೊಂಡು ಓಟು ಪಡೆಯಲು ಅವಕಾಶ ಕಲ್ಪಿಸದೇ, ರಾಜ್ಯಪಾಲರು, ಕೂಡಲೇ ಅಂಕಿತ ಹಾಕಬೇಕು ಒತ್ತಾಯಿಸಿದ್ದಾರೆ.




