Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಾದಿಗ ಸಮುದಾಯಕ್ಕೆ ವೈಜ್ಞಾನಿಕ ಒಳಮೀಸಲಾತಿ ; ನ್ಯಾ.ನಾಗಮೋಹನ್ ದಾಸ್ ಅವರಿಗೆ ಮನವಿ

ರಾಜ್ಯದ ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದಿರುವ ರಾಜ್ಯದ ಮಾದಿಗ ಸಮುದಾಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು ಮೀಸಲಾತಿಯನ್ನು ವೈಜ್ಞಾನಿಕವಾಗಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒಳಮೀಸಲಾತಿ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ ಅವರಿಗೆ ಡಾ. ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾ ಸಮಿತಿಯು ಮನವಿ ಸಲ್ಲಿಸಿದೆ.

ಕಳೆದ 30 ವರ್ಷಗಳಿಂದ ಮಾದಿಗ ಸಮುದಾಯ ಒಳಮೀಸಲಾತಿಗೆ ಹೋರಾಟ ಮಾಡಿಕೊಂಡು ಬಂದಿದೆ, 2005ರಲ್ಲಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ರಚನೆಯಾಗಿ ಸುದೀರ್ಘ ಸಮಯದ ಬಳಿಕ 2012ರಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳನ್ನು 4 ಭಾಗಗಳನ್ನಾಗಿ ಮಾಡಿ ಮಾದಿಗ ಸಮುದಾಯಕ್ಕೆ ಸೇರಿದ ಉಪ ಜಾತಿಗಳಿಗೆ 15%ರಲ್ಲಿ 6% ನಿಗದಿಪಡಿಸಿದೆ. ಆನಂತರ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ -2317/2011ಕ್ಕೆ ಸಂಬಂಧಿಸಿದಂತೆ ದೇವಿಂದರ್ ಸಿಂಗ್ V/S ಪಂಜಾಬ್ ರಾಜ್ಯ ಸರ್ಕಾರದ ನಡುವಿನ ಪ್ರಕರಣದಲ್ಲಿ 7 ನ್ಯಾಯಮೂರ್ತಿಗಳ ( ನ್ಯಾಯಮೂ,ರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಒಳಗೊಂಡು ) ಸಂವಿಧಾನ ಪೀಠವು ದಿನಾಂಕ 01-08-2024 ರಂದು ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯವರಿಗೆ ನೀಡುವ ಒಳಮೀಸಲಾತಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ ಹಾಗೂ ಭಾರತೀಯ ಸಂವಿಧಾನದ ಆರ್ಟಿಕಲ್ 341 ರ ಉಲ್ಲಂಘನೆ ಆಗುವುದಿಲ್ಲ ಎಂದು ತೀರ್ಪು ನೀಡಿರುತ್ತದೆ. ಹಾಗಾಗಿ ಒಳಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ವೈಜ್ಞಾನಿಕವಾಗಿ ನೀಡಬಹುದಾಗಿದೆ ಎಂದು ನ್ಯಾ.ನಾಗಮೋಹನ್ ದಾಸ್ ಅವರಿಗೆ ಕರ್ನಾಟಕ ಮಾದಿಗರ ಒಳಮಿಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ನೇತೃತ್ವದ ನಿಯೋಗ ಮನವರಿಕೆ ಮಾಡಿಕೊಟ್ಟಿತು.

nudikarnataka.com

ದತ್ತಾಂಶಗಳ ಸಂಗ್ರಹಕ್ಕೆ ಪೂರ್ವಕವಾಗಿ ರಾಜ್ಯದಲ್ಲಿರುವ ಹಾವನೂರು ಆಯೋಗದ ವರದಿ, ಎ ಜೆ ಸದಾಶಿವ ಆಯೋಗ ವರದಿಯನ್ನು ಅವಲೋಕಿಸಬಹುದಾಗಿದೆ. ಮಾದಿಗ ಸಮುದಾಯಕ್ಕೆ ಶೈಕ್ಷಣಿಕವಾಗಿ ಹಿಂದುಳಿದಿದ್ದು ಪರಿಶಿಷ್ಟ ಜಾತಿಯ ಇತರೆ ಉಪಜಾತಿಗಳಿಗೆ ನೀಡಿದಂತೆ, ಮಾದಿಗ ಸಮುದಾಯದ ವಿದ್ಯಾ ಸಂಸ್ಥೆಗಳಿಗೆ ಹಾಗೂ ಮಾದಿಗ ಮಠಗಳಿಗೆ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿ ತೆರೆಯಲು ಅನುಮತಿ ನೀಡಿಲ್ಲ. IAS, IPS, IFS, KAS, ಮುಂತಾದ ಅಧಿಕಾರಿಗಳು ತುಂಬಾ ವಿರಳವಾಗಿದ್ದು ಇವೆಲ್ಲ ಬಲಿತ ದಲಿತರ ಹಾಗೂ ಸ್ಪೃಶ್ಯ ಜನಾಂಗದವರ ಪಾಲು ಆಗಿರುವುದನ್ನು ಕಾಣಬಹುದು. ಸಾಮಾಜಿಕ, ಉದ್ಯೋಗ ಸರ್ಕಾರಿ ಸವಲತ್ತು ರಾಜಕೀಯ ಆರ್ಥಿಕವಾಗಿ ಹಿಂದುಳಿದ ಜನಾಂಗವಾಗಿರುವುದುರಿಂದ ಕೂಡಲೇ ನ್ಯಾಯಾಲಯ ತೀರ್ಪುನಂತೆ ಮಾದಿಗ ಸಮುದಾಯಕ್ಕೆ 6%ಒಳಮೀಸಲಾತಿ ನೀಡುವಂತೆ ಸರ್ಕಾರಕ್ಕೆ ವರದಿ ನೀಡಬೇಕಾಗಿ ಮನವಿ ಮಾಡಿದರು.

ಶಾಶ್ವತ ಪರಿಹಾರಕ್ಕೆ ಮನವಿ

ಮಂಡ್ಯ ಜಿಲ್ಲೆಯಲ್ಲಿ ಆದಿ ಕರ್ನಾಟಕ ಜಾತಿ ದೃಢೀಕರಣ ಪತ್ರವನ್ನು ಮಾದಿಗ ಹಾಗೂ ಹೊಲೆಯ ಸಮುದಾಯಗಳೆರಡು ತೆಗೆದುಕೊಳ್ಳುತ್ತಿವೆ, ಹಾಗಾಗಿ ಆದಿ ಕರ್ನಾಟಕರೆಂದರೇ ಹೊಲೆಯ ಸಮುದಾಯ ಎಂದು ಹೇಳುವುದು ಸರಿಯಲ್ಲ. ಆದಕಾರಣ ರಾಜ್ಯದ್ಯಾಂತ ಒಂದೇ ರೀತಿಯ ಆದಿ ಕರ್ನಾಟಕ (ಮಾದಾರ, ಮಾದಿಗ) ಎಂದು ಆದಿ ಕರ್ನಾಟಕ (ಛಲವಾದಿ, ಹೊಲೆಯ) ಎಂದು ಜಾತಿ ದೃಢೀಕರಣ ಪತ್ರ ನೀಡಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾನೂನು ಬದ್ಧವಾಗಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರಕ್ಕೆ ವರದಿ ಮಾಡಬೇಕು ಮನವಿ ಮಾಡಿದರು.

ನೌಕರಿ ಪಡೆಯಲು ಸಿಂಧುತ್ವ ಪತ್ರ ಪಡೆಯುವಾಗ ಶಾಲಾ ದಾಖಲಾತಿಗಳಲ್ಲಿ, ಮಾದಿಗ, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಜಾಂಬವ ಎಂದು ಬರೆಸಿದರೂ, ಮುಂದೆ ಸಿಂಧುತ್ವ ಪತ್ರ ಪಡೆಯಲು ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್.ಕಾಂತರಾಜು, ತಾಲ್ಲೂಕು ಅಧ್ಯಕ್ಷರಾದ ಹೆಚ್ ಎಂ ಪುಟ್ಟರಾಜು, ಹನುಮಯ್ಯ, ಬಿ.ನರಸಿಂಹಮೂರ್ತಿ, ಎಂ.ಪಿ.ಚಂದ್ರಶೇಖರ್, ಚಾಮನಹಳ್ಳಿ ಮಂಜು, ಶಿವಕುಮಾರ್, ಸತೀಶ್, ಮಂಜುನಾಥ, ಮಹಿಳಾ ಅಧ್ಯಕ್ಷರಾದ ಜಯಂತಿ, ಶಾಂಭವಿ, ರಾಣಿ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ