ಮಹಾಭಾರತದಲ್ಲಿನ ಅರ್ಜುನನ ಮತ್ತೊಬ್ಬ ಮಗನಾದ ‘ಐರಾವನ್’ ಪಾತ್ರದಿಂದ ಸ್ಪೂರ್ತಿ ಪಡೆದ ಕಥೆಯನ್ನು ಇಂದಿನ ಕಾಲಘಟ್ಟಕ್ಕೆ ಅನ್ವಯಿಸಿ ನಿರ್ಮಿಸಿರುವ ಚಿತ್ರ ಐರಾವನ್, ಈ ಚಿತ್ರ ಜೂ.16ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಬರಲಿದೆ.
ಇದು ಮೆಡಿಕಲ್ ಉದ್ಯಮ ಕುರಿತಾದ ಕಥಾ ಹಂದರವನ್ನು ಹೊಂದಿದ್ದು, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ, ಈ ಚಿತ್ರವನ್ನು ರಾಮ್ಸ್ ರಂಗ ಅವರು ನಿರ್ದೇಶಕ ಮಾಡಿದ್ದು, ಜಯರಾಮ್ ಕಾರ್ತಿಕ್ ( ಜೆಕೆ) ನಾಯಕ ನಟನಾಗಿ, ಅದ್ವಿತಿ ಶೆಟ್ಟಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ ಎಂದು ನಿರ್ಮಾಪಕ ಡಾ.ನಿರಂತರ ಗಣೇಶ್ ಮಂಡ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೋವಿಡ್ ಸಾಂಕ್ರಾಮಿಕ ರೋಗ ಇದ್ದಂತಹ ಸಂದರ್ಭದಲ್ಲಿ ಚಿತ್ರದ ಕಥೆಯನ್ನು ಬರೆಯಲಾಗಿತ್ತು. ಸಿನಿಮಾ ಮಾಡುವುದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಎಂದು ನಂಬಿದ್ದೆ. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಇಳಿದೆ ಅವರು ತಿಳಿಸಿದರು.
ಇದೊಂದು ಮೆಡಿಕಲ್ ಉದ್ಯಮದ ಕಥೆ, ನನ್ನದು ಅತ್ಯಂತ ಶ್ರೀಮಂತ ವ್ಯಕ್ತಿಯ ಪಾತ್ರವಾಗಿದ್ದು, ದ್ವಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಮ್ಸ್ ರಂಗ ಅವರು ಗ್ರಾಮೀಣ ಪ್ರದೇಶದಿಂದ ಬಂದವರು, ತಮ್ಮ ಚೊಚ್ಚಲ ನಿರ್ದೇಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ನಾಯಕ ಜೆಕೆ ತಿಳಿಸಿದರು.
ನನ್ನದು ನಿಹಾರಿಕಾ ಎಂಬ ಪಾತ್ರ, ಪಾಸಿಟಿಕ್ ರೋಲ್ ನಲ್ಲಿ ಕಾಣಿಸಿಕೊಂಡಿದೆ, ಈ ಸಿನಿಮಾ ನನಗೆ ಸಾಕಷ್ಟು ಅನುಭವ ಕೊಟ್ಟಿದೆ. ಪ್ರದೀಪ್ ವರ್ಮಾ ಅವರು ಸಂಗೀತ ನೀಡಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ ಎಂದು ನಾಯಕಿ ಅದ್ವಿತಿ ಶೆಟ್ಟಿ ವಿವರಿಸಿದರು.
ಗೋಷ್ಠಿಯಲ್ಲಿ ಚಿತ್ರತಂಡದ ದೇವರಾಜ್ ಹಾಗೂ ಸಂತೋಷ್ ಉಪಸ್ಥಿತರಿದ್ದರು.




