ಲೋಕಸಭಾ ಚುನಾವಣೆಗಳ ಫಲಿತಾಂಶ ನೋಡಿದರೆ ಮೋದಿ ಯುಗದ ಅಂತ್ಯವನ್ನು ಅತ್ಯಂತ ಸ್ಪಷ್ಟವಾಗಿ ನೀಡುತ್ತಿವೆ ಎನ್ನಬಹುದು.
ಒಂದು ವೇಳೆ ಬಿಜೆಪಿ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಸಹ ಮೋದಿಜೀ ಪ್ರಧಾನಿ ಆಗುವ ಸಾಧ್ಯತೆ ಕಡಿಮೆ ಎನ್ನುತ್ತಿವೆ ದೆಹಲಿ ಮೂಲಗಳು.
ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆ, ಪ್ರತಿಯೊಂದು ಕಾರ್ಯಕ್ರಮ, ಪ್ರತಿಯೊಂದು ಸ್ಕೀಮ್ ಗಳಲ್ಲಿ ತನ್ನ ಪೋಟೋ ಹಾಕಿಕೊಂಡು ಮಿಂಚಿದ್ದರು.ಕೇಂದ್ರ ಸರ್ಕಾರದಲ್ಲಿ ಅನುಭವಿ ಬಿಜೆಪಿ ನಾಯಕರಿದ್ದರೂ ಸಹ ಅವರು ಗೌಣವಾಗಿದ್ದರು.ಯಾವುದೇ ಇಲಾಖೆಯ ಸಚಿವರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವಾಗಲೂ ಮೋದಿಜಿಯವರೇ ವಿಜೃಂಭಿಸುತ್ತಿದ್ದರೇ ಹೊರತು ಸಚಿವರನ್ನು ಡಮ್ಮಿ ಮಾಡಲಾಗುತ್ತಿತ್ತು.
ಈ ಕಾರಣದಿಂದಲೇ ಮೋದಿಜೀ ಅವರನ್ನು ಮಿತ್ರ ಪಕ್ಷಗಳು ಒಪ್ಪಲು ಸಾಧ್ಯವೇ ಇಲ್ಲವೆನ್ನುತ್ತಿದ್ದು, ಈಗ ಒಂದು ವೇಳೆ ಎನ್ಡಿಎ ಆಧಿಕಾರಕ್ಕೆ ಬಂದರೂ ಸಹ ಪರ್ಯಾಯ ನಾಯಕತ್ವವನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಬಂದಿದೆ.ಒಟ್ಟಿನಲ್ಲಿ ಇವತ್ತು ಭಾರತದ ಜನತೆ ಮೋದಿ ಯುಗವನ್ನು ಕೊನೆಗೊಳಿಸಿದ್ದಾರೆ ಎಂದೇ ಹಲವು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.




