Sunday, October 20, 2024

ಪ್ರಾಯೋಗಿಕ ಆವೃತ್ತಿ

ಅಂಬೇಡ್ಕರ್ ಸಂವಿಧಾನ ನೀಡಿದರೆ, ಜಗಜೀವನರಾಂ ಹಸಿವು ನೀಗಿಸಿದರು: ನರೇಂದ್ರಸ್ವಾಮಿ

ಅಂಬೇಡ್ಕರ್‌ರವರು ದೇಶಕ್ಕೆ ಉತ್ತಮ ಸಂವಿಧಾನವನ್ನು ನೀಡಿದರೇ ಡಾ.ಬಾಬು ಜಗಜೀವನ್‌ರಾಂ ಅವರು ಹಸಿರು ಕ್ರಾಂತಿಯನ್ನೇ ಮಾಡಿ ರಾಷ್ಟ್ರದ ಹಸಿವನ್ನು ನಿವಾರಿಸುವುದರ ಮೂಲಕ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಆಚರಿಸಿ ನಂತರ ಮಾತನಾಡಿದ ಅವರು, ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಬಾಬೂಜಿ ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’, ಇಂತಹ ಮಹಾನ್‌ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಚಿಕ್ಕಲಿಂಗಯ್ಯ. ಪುರಸಭೆ ಸದಸ್ಯರಾದ ಪ್ರಮೀಳ. ಶಿವಸ್ವಾಮಿ. ರಾಜಶೇಖರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೊಡ್ಡಯ್ಯ ಮತ್ತು ಸಿ.ಪಿ ರಾಜು. ಮುಖಂಡರುಗಳಾದ ಮಾಧು. ದೇವರಾಜು. ಕಿರಣ್ ಶಂಕರ್. ಶಾಂತರಾಜು.ವೆಂಕಟೇಶ್. ರಮೇಶ್.ಚಿಕ್ಕಲಿಂಗಯ್ಯ ಸತೀಶ್.ಮಂಜು.ಸಿದ್ದರಾಜು ಸೇರಿದಂತೆ ಇತರರು ಇದ್ದರು.

ತಾಲ್ಲೂಕು ಕಚೇರಿಯಲ್ಲಿ ಆಚರಣೆ

ಮಳವಳ್ಳಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಬುಜಗಜೀವನ್‌ರಾಂ ಅವರ ಜನ್ಮದಿನಾರಣೆ ಆಚರಿಸಲಾಯಿತು.

ತಹಸೀಲ್ದಾರ್ ಲೋಕೇಶ್ ಮಾತನಾಡಿ ಮಾತನಾಡಿ, ಹಿಂದೆ ದೇಶದಲ್ಲಿ ಆಹಾರ ಉತ್ಪಾದನೆ ಕೊರತೆಯಿದ್ದು ಜನರು ಆಹಾರಕ್ಕೂ ತೊಂದರೆಯಾಗಿತ್ತು, ಇದನ್ನು ಮನಗಂಡ ಜಗಜೀವನ್‌ರಾಂ ಅವರು ಆಹಾರ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿ, ಸಾಧಿಸಿ ಹಸಿರು ಕ್ರಾಂತಿ ಹರಿಕಾರ ಎಂದೆನಿಸಿಕೊಂಡರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಇ.ಓ ಮಮತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!