Monday, November 23, 2026

ಪ್ರಾಯೋಗಿಕ ಆವೃತ್ತಿ

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಆಯ್ಕೆ : ಜಾಗೃತ ಕರ್ನಾಟಕ ಸ್ವಾಗತ

ಹಿರಿಯರು, ವಿದ್ವಾಂಸರು ಆದ ಗೊ.ರು ಚನ್ನಬಸಪ್ಪ ಅವರನ್ನು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಜಾಗೃತ ಕರ್ನಾಟಕ ಸಂಘಟನೆ ಮಂಡ್ಯ ಘಟಕವು ಸ್ವಾಗತಿಸಿದೆ.

nudikarnataka.com

ಜನಪದ ತಜ್ಞರೂ ಆದ ಗೊ.ರು.ಚ ಅವರು ಈ ಹಿಂದೆ ಕಸಾಪ ಅಧ್ಯಕ್ಷರಾಗಿಯೂ ಸಹ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಜೀವಪರ ಚಿಂತನೆಗಳ ಪರವಾಗಿ ಸದಾ ನಿಂತಿರುವವರು. ಗೊ.ರು.ಚ ಅವರು ಜಾತ್ಯತೀತವಾಗಿ ಮತ್ತು ಬಸವತತ್ವದ ಪರವಾಗಿ ನಿಂತ ಹಿರಿಯ ಸಾಹಿತಿಯಾಗಿದ್ದಾರೆ. ಅವರು ಸಮ್ಮೇಳನಾಧ್ಯಕ್ಷರಾಗಿರುವುದು ಸಮಯೋಚಿತವಾಗಿದೆ. ಅವರ ಆಯ್ಕೆ ನಮಗೆ ಸಂತಸ ತಂದಿದೆ ಎಂದು ಜಾಗೃತ ಕರ್ನಾಟಕದ
ಸಂತೋಷ್ ಜಿ, ನಾಗೇಶ್ ಎನ್, ಪೃಥ್ವಿ, ಸುಬ್ರಮಣ್ಯ ಹಾಗೂ ನಗರಕೆರೆ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಸಂಭವಿಸಿದ್ದವು. ಆದರೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿವಾದ ರಹಿತವಾಗಿ, ಅರ್ಥಪೂರ್ಣವಾಗಿ ನಡೆದಿರುವುದಕ್ಕೆ ಆಯ್ಕೆ ಸಮಿತಿಗೆ ಜಾಗೃತ ಕರ್ನಾಟಕ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.

ಈಗ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಕನ್ನಡದ ನೆಲದ ಪರಂಪರೆ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆ ನೀಡಿದ ಕುವೆಂಪುರವರ ವಿಚಾರ ಮತ್ತು ಬಸವತತ್ವದ ವಿಚಾರಗಳ ಕುರಿತು ಹೆಚ್ಚು ಚರ್ಚೆಯಾಗುವಂತೆ ಮತ್ತು ಮಂಡ್ಯ ಜಿಲ್ಲೆಯ ಸಮಸ್ಯೆಗಳು ಹಾಗೂ ಮಂಡ್ಯದ ಸಮಗ್ರ ಅಭಿವೃದ್ದಿಯ ಮುನ್ನೋಟದ ಕುರಿತಂತೆ ಗೋಷ್ಠಿಗಳು ಇರುವಂತೆ, ಸಮ್ಮೆಳನ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ