Sunday, March 3, 2024

ಪ್ರಾಯೋಗಿಕ ಆವೃತ್ತಿ

ಜನವರಿ ಅಂತ್ಯದವರೆಗೆ ಮೈಷುಗರ್ ಕಾರ್ಯ ನಿರ್ವಹಣೆ

ಮಂಡ್ಯ ರೈತದ ಜೀವನಾಡಿ ಮೈಷುಗರ್ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯವನ್ನು 2023ರ ಜನವರಿ ಅಂತ್ಯದವರೆಗೆ ಮುಂದುವರೆಸುವಂತೆ ಜಿಲ್ಲಾಡಳಿತಕ್ಕೆ  ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚನೆ ನೀಡಿದ್ದಾರೆ.

ಡಿಸೆಂಬರ್ ಅಂತ್ಯಕ್ಕೆ ಮೈಷುಗರ್ ಸ್ಥಗಿತಗೊಳಿಸುವುದಾಗಿ ಇತ್ತೀಚೆಗೆ ಮೈಷುಗರ್ ಆಡಳಿತ ಮಂಡಳಿ ಕರಪತ್ರ ಹೊರಡಿಸಿತ್ತು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಕಾರ್ಖಾನೆ ಸ್ಥಗಿತಗೊಳಿಸದಂತೆ ಸಚಿವರಿಗೆ ಒತ್ತಾಯ ಮಾಡಿತ್ತು.

ಇದರಿಂದಾಗಿ ಇನ್ನು ಒಂದು ತಿಂಗಳ ಕಾಲ ಕಬ್ಬು ನುರಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಆದ್ದರಿಂದ ಒಪ್ಪಿಗೆಯಾಗಿರುವ ಕಬ್ಬನ್ನು ಹಲವಾರು ಕಾರಣಗಳಿಂದ ಸರಬರಾಜು ಮಾಡಲಾಗದೆ ಬಾಕಿ ಉಳಿಸಿಕೊಂಡಿದ್ದ ರೈತರಿಗೆ ಇದರಿಂದ ಅನುಕೂಲವಾಗಲಿದೆ  ರೈತ ಮುಖಂಡ ಎಸ್.ಸಿ. ಮಧುಚಂದನ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!