Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಆಧುನಿಕ ಭಾರತದ ಶಿಲ್ಪಿ ಜವಾಹರ್ ಲಾಲ್ ನೆಹರು ; ಚಿದಂಬರ್

ಸ್ವಾತಂತ್ರ್ಯ ನಂತರದ ಭಾರತವನ್ನು ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ಇತರ ವಿವಿಧ ಕ್ಷೇತ್ರಗಳಲ್ಲಿ ಕೊಂಡೊಯ್ದ ಆಧುನಿಕ ಶಿಲ್ಪಿ ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಸ್ಮರಿಸಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ 60ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮೊದಲ ಪ್ರಧಾನಮಂತ್ರಿಯಾಗಿ ಏದುರಿಸಿದ ಸವಾಲುಗಳು, ಬಡತನ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿಸಲು ಹಾಕಿಕೊಂಡು ದೂರದೃಷ್ಠಿತ್ವದ ಮಹಾಯೋಜನೆಗಳು ಅವಿಸ್ಮರಣೀಯ ಎಂದು ನುಡಿದರು.

೧೯೪೭ ರಲ್ಲಿ ಸ್ವಾತಂತ್ರ‍್ಯದ ನಂತರ ಭಾರತದ ಮೊದಲ ಪ್ರಧಾನ ಮಂತ್ರಿಯಾದರು. ನೆಹರು ಅವರು ೧೬ ವರ್ಷಗಳಿಗೂ ಹೆಚ್ಚು ಕಾಲ ಹುದ್ದೆಯಲ್ಲಿ ಇದ್ದರು ಮತ್ತು ೨೭ ಮೇ ೧೯೬೪ ರಂದು ಹೃದಯಾಘಾತದಿಂದ ನಿಧನರಾದರು ಎಂದು ತಿಳಿಸಿದರು.

ಮಹಿಳಾ ಕಾಂಗ್ರೆಸ್ ಮುಖಂಡರಾದ ತಗ್ಗಹಳ್ಳಿ ಯಶೋಧ ಮಾತನಾಡಿ, ನಮ್ಮ ಹೆಮ್ಮೆಯ ಮೊದಲ ಪ್ರಧಾನಮಂತ್ರಿಗಳಾದ ನೆಹರು ಅವರು ಅಧಿಕಾರ ವಹಿಸಿಕೊಂಡಾಗ ಬ್ರಿಟೀಷರು ಭಾರತದೇಶವನ್ನು ಸಂಪೂರ್ಣವಾಗಿ ದೋಚಿದ್ದರು, ಬಡತನ, ನಿರುದ್ಯೋಗ, ಆಹಾರಸಮಸ್ಯೆ, ಆರೋಗ್ಯಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಭಾರತದೇಶವನ್ನು ಪಾರು ಮಾಡಲು ಶ್ರಮಪಟ್ಟರು ಎಂದು ತಿಳಿಸಿದರು.

ಆರ್ಥಿಕ ಬಡತನದಲ್ಲಿಯೂ ವಿದೇಶಗಳ ನೆರವಿನಿಂದ ಭಾರತದೇಶವನ್ನು ಪ್ರಗತಿರಾಷ್ಟ್ರವನ್ನಾಗಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಹಂತ ಹಂತವಾಗಿ ಅಭಿವೃದ್ದಿ ಶೀಲರಾಷ್ಟ್ರವನ್ನಾಗಿಸಲು ಸಂಕಲ್ಪಮಾಡಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಮಿತಿಯ ಎಸ್ಸಿ ವಿಭಾಗದ ಅಧ್ಯಕ್ಷ ಶ್ರೀಧರ್, ಸೇವಾದಳ ಅಧ್ಯಕ್ಷ ಕೃಷ್ಣೇಗೌಡ, ಕಚೇರಿ ವ್ಯವಸ್ಥಾಪಕ ಮಲ್ಲೇನಹಳ್ಳಿ ಪ್ರಕಾಶ್, ಜಯರಾಂ, ನಾಗರಾಜು, ದ್ಯಾಪಸಂದ್ರ ಶಂಕರಲಿಂಗೇಗೌಡ, ನಾಗೇಶ್, ರಾಜು, ಕಾರ್ಮಿಕ ವಿಭಾಗದ ಅಧ್ಯಕ್ಷ ರಾಮಕೃಷ್ಣ, ರಮೇಶ್‌ಮಿತ್ರಿ ಮತ್ತಿತರರಿದ್ದರು.

ಮಂಡ್ಯ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ೬೦ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕಾರ್ಯಾಧ್ಯಕ್ಷ ಎಂ.ಎಸ್.ಚಿದAಬರ್ ಚಾಲನೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ