ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ವರಿಷ್ಠರಾದ ಎಚ್.ಡಿ.ದೇವೇಗೌಡರು, ಮಾಜಿ.ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಮಾರ್ಗದರ್ಶದಲ್ಲಿ ನಾವೆಲ್ಲರೂ ದುಡಿಯೋಣ ಎಂದು ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮು ಹೇಳಿದರು.
ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಎಚ್.ಕೆ.ರಾಮು ಹಿತೈಷಿಗಳು-ಸ್ನೇಹಿತರ ಬಳಗ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನಾಗಿ ಮಾಡುವುದು ಅಗತ್ಯವಿದೆ, ರಾಜ್ಯದ ಅತ್ಯಾಧುನೀಕರಣದ ಸಮಗ್ರ ಅಭಿವೃದ್ಧಿಗೆ ಕುಮಾರಣ್ಣ ಅವರೇ ಬರಬೇಕಿದೆ ಎಂದು ಜನತೆ ಕಾಯುತ್ತಿದ್ದಾರೆ ಎಂದು ಹೇಳಿದರು.
ಕೇವಲ 5-6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲ್ಲಿದೆ, ಈ ಹಂತದಲ್ಲಿ ಮಾಜಿ.ಸಿ.ಎಂ.ಕುಮಾರಸ್ವಾಮಿ ಅವರು ಹಾಕಿಕೊಂಡಿರುವ ಮಹತ್ವಪೂರ್ಣ ಯೋಜನೆಯಾದ ಪಂಚರತ್ನ ಕಾರ್ಯಕ್ರಮದ ಯಶಸ್ಸಿನ ಜೊತೆಗೆ 123 ಸಂಖ್ಯೆಯ ಸರಳ ಬಹುಮತ ಪಡೆಯಲು ಎಲ್ಲರೂ ದುಡಿಯಬೇಕೆಂದರು.
ರಾಜ್ಯದಲ್ಲಿ ಜೆಡಿಎಸ್ ನಿಂದ ಹಾಕಿಕೊಂಡಿರುವ ಪಂಚರತ್ನ ಕಾರ್ಯಕ್ರಮಗಳಂತೆ ಉಚಿತ ಶಿಕ್ಷಣ, ಉಚಿತ
ಆರೋಗ್ಯ, ಯುವಜನತೆಗೆ ಉದ್ಯೋಗ, ರೈತರ ಅಭಿವೃದ್ಧಿ, ವಸತಿ ಯೋಜನೆಗಳು ಜಾರಿಗೊಂಡು ಅತ್ಯಾಧಿನಿಕರಣದೊಂದಿಗೆ ಸಮಗ್ರ ಆಡಳಿತ ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.
ನ.1ರಂದು ನಾಡಿನಾದ್ಯಂತ ಮನೆ ಮನೆಗಳ ಮೇಲೆ ಕನ್ನಡ ಭಾವುಟ ಹಾರಿಸುವ ಮೂಲಕ ಕನ್ನಡರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದೆ, ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ, ಪಕ್ಷ ಸಂಘಟಿಸೋಣ, ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು. ಇದೇ ಸಂದರ್ಭದಲ್ಲಿ ಎಚ್.ಕೆ.ರಾಮು ಅವರನ್ನು ಹಿತೈಷಿಗಳು-ಸ್ನೇಹಿತರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಎಚ್.ಕೆ.ರಾಮು ಹಿತೈಷಿಗಳು-ಸ್ನೇಹಿತರ ಬಳಗದ ಪದಾಧಿಕಾರಿಗಳಾದ ಶಿವರಾಂ, ಡಾ.ಕೃಷ್ಣೇಗೌಡ ಹುಸ್ಕೂರು, ಸಿದ್ದರಾಮು, ಬಲ್ಲೇನಹಳ್ಳಿ ಮಂಜುನಾಥ್, ಉಮೇಶ್, ದೇವರಾಜು, ತಿಮ್ಮೇಗೌಡ, ಮಾಯಿಗೌಡ, ನಿವೃತ್ತನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಲೋಕೇಶ್ ಚಂದಗಾಲು, ಸಣ್ಣಪ್ಪ, ರಮೇಶ್ ಮತ್ತಿತರರಿದ್ದರು.




