- ಪತ್ನಿಯ ದೂರು ಆದರಿಸಿ ಗ್ರಾಮದ 10 ಮಂದಿಯ ವಿರುದ್ಧ ಎಫ್ಐಆರ್ ದಾಖಲು
- ಮೃತದೇಹವನ್ನು ವಿದ್ಯುತ್ ಕಂಬಕ್ಕೆ ನೇತುಹಾಕಿದ ದುಷ್ಕರ್ಮಿಗಳು
ಜಾರ್ಖಂಡಿನ ಹಜಾರಿಬಾಗ್ ಜಿಲ್ಲೆಯಲ್ಲಿ ದಲಿತ ಯುವಕನನ್ನು ಮನೆಯಿಂದ ಹೊರಗೆ ಎಳಿದು ಹತ್ಯೆ ಮಾಡಿ ವಿದ್ಯುತ್ ಕಂಬಕ್ಕೆ ನೇತು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಪಚ್ಚಾ ಎಂಬ ಗ್ರಾಮದಲ್ಲಿ ಮೃತರನ್ನು ಸಿತಾನ್ ಭೂಯಾನ್(35) ಎಂದು ಗುರುತಿಸಲಾಗಿದೆ.
ಯುವಕನ ಶವವನ್ನು ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಗ್ರಾಮಸ್ಥರು ನೋಡಿದ್ದಾರೆ. ಮಾಹಿತಿ ತಿಳಿದು ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಕೆಳಗಿಳಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಬಾಲಕಿ ಅತ್ಯಾಚಾರ- ಕೊಲೆ ಖಂಡಿಸಿ ರಸ್ತೆಗಿಳಿದ ಜನತೆ
ಮರಣೋತ್ತರ ಪರೀಕ್ಷೆಯ ನಂತರ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ ಆರೋಪಿಗಳನ್ನು ಬಂಧಿಸುವವರೆಗೂ ಶವವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಹಲವು ಗಂಟೆಗಳ ಕಾಲ ಪೊಲೀಸರ ಜೊತೆಗೆ ವಾದಕ್ಕೆ ಇಳಿದ ಗ್ರಾಮಸ್ಥರು, ಸರ್ಕಾರದ ನಿಬಂಧನೆಗಳ ಪ್ರಕಾರ ಪೊಲೀಸರಿಗೆ ಶವವನ್ನು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಜನಾರ್ದನ್ ಸಾಹು ಸುರೇಶ್ ಸಾಹು ದೀಪಕ್ ಶಹೊ ಶಂಕರ್ಸಾಹೂ ಸೇರಿದಂತೆ ಎಂಟರಿಂದ ಹತ್ತು ಜನರ ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಸೀತಾನ್ ಭೂಯಾನ್ ಅವರ ಪತ್ನಿ ಪಾರೋ ದೇವಿ ಪೊಲೀಸರಿಗೆ ದೂರು ನೀಡಿದ್ದಾರೆ.




