ಮಳವಳ್ಳಿ ತಾಲ್ಲೂಕಿನಾದ್ಯಂತ ನಡೆದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು. ಸುಮಾರು 50 ಕ್ಕಿಂತ ಹೆಚ್ಚು ಜನರು 100 ರೂ. ಕೊಟ್ಟು ಸದಸ್ಯತ್ವ ಪಡೆದು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕೈ ಜೋಡಿಸಿದರು.
ಈ ಕಾರ್ಯಕ್ರಮಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ರಮೇಶ್ ಗೌಡ ಜಿ.ಎಂ , ಮಂಡ್ಯ ಜಿಲ್ಲಾ ಅಧ್ಯಕ್ಷ ಡಿ ಜಿ ನಾಗರಾಜ್, ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಮಂಡ್ಯ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರಮೋದ ಎಸ್ , ಪ್ರಧಾನ ಕಾರ್ಯದರ್ಶಿ ದೀಪಿಕಾ, ನಾಗಮಂಗಲ ಅಧ್ಯಕ್ಷ ಮಂಜುನಾಥ್, ಮಳವಳ್ಳಿ ತಾಲ್ಲೂಕಿನ ಅಧ್ಯಕ್ಷ ಮಾದೇಗೌಡ, ಉಪಾಧ್ಯಕ್ಷ ಪರಮೇಶ ಸಿ ಭಾಗವಹಿಸಿದ್ದರು.
ಜಂಟಿ ಕಾರ್ಯದರ್ಶಿ ವಿಷಕಂಠಮೂರ್ತಿ ವಿ ಎನ್, ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ ಹೆಚ್ ಎಮ್, ಕಾರ್ಯದರ್ಶಿಗಳಾದ ಮಳವಳ್ಳಿಯ ರೂಪಶ್ರೀ, ಸತೀಶ್ ಎಸ್ ಎಮ್.ತಿಬ್ಬ, ಮುತ್ತು, ಮಹದೇವ,ಪೂರಿಗಾಲಿಯ ಸಿದ್ದರಾಜು, ಎಸ್ ಸಿ ಎಸ್ ಟಿ ಘಟಕದ ಅಧ್ಯಕ್ಷರಾದ ಸಿದ್ದರಾಜು, ಉಪಾಧ್ಯಕ್ಷರಾದ ಶಿವಮೂರ್ತಿ ಪಾಲ್ಗೊಂಡಿದ್ದರು.




