Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಿವೇಶನಗಳ ಪರಭಾರೆ ವಿಳಂಬ ; ಸಚಿವರ ಗಮನ ಸೆಳೆದ ಪತ್ರಕರ್ತರು

ಮಂಡ್ಯ ಜಿಲ್ಲೆಯ ವಿವಿಧ ತಾಲೂಕು ಪತ್ರಕರ್ತರ ಸಂಘಗಳ ಕಟ್ಟಡದ ನಿವೇಶನಗಳ ಖಾತೆ ನಿರ್ವಹಣೆ ಮತ್ತು ನಿವೇಶನಗಳ ಪರಭಾರೆ ವಿಚಾರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪುರಸಭೆಗಳು ವಿಳಂಬ ಅನುಸರಿಸುತ್ತಿವೆ ಎಂದು ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಗಮನ ಸೆಳೆದು, ಮನವಿ ಸಲ್ಲಿಸಲಾಯಿತು.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಗಳಾದ ಜಿಲ್ಲೆಯ ಉಳಿದ 6 ತಾಲೂಕು ಸಂಘಗಳ ಪೈಕಿ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಮಳವಳ್ಳಿ ತಾಲೂಕು ಸಂಘಗಳ ನಿವೇಶನದ ಖಾತೆ ನಿರ್ವಹಣೆ ಮತ್ತು ನಿವೇಶನ ಪರಭಾರೆ ವಿಚಾರ ಶಿಫಾರಸ್ಸು ಮಾಡಲು ಗಮನ ಹರಿಸಲು ಸೂಚಿಸುವಂತೆ ಕೋರಿದರು.

ಅಲ್ಲದೇ ಮದ್ದೂರು ಹಾಗೂ ನಾಗಮಂಗಲ ತಾಲೂಕು ಸಂಘಗಳ ಕಟ್ಟಡ ನಿರ್ಮಾಣಕ್ಕೆ ಪಟ್ಟಣ  ವ್ಯಾಪ್ತಿಯಲ್ಲಿಯೇ ನಿವೇಶನ ನೀಡಲು ಕ್ರಮ ವಹಿಸುವಂತೆ ಆದೇಶಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಸೋಮಶೇಖರ್ ಕೆರಗೋಡು, ಸದಸ್ಯ ಪ್ರವೀಣ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ