ಮಳವಳ್ಳಿ ಪಟ್ಟಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದರು.
ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿಯ ನಿವಾಸ ಶುಕ್ರವಾರ ಭೇಟಿ ನೀಡಿ ಬಾಲಕಿಯ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಕೃತ್ಯ ಇದು ಇಡೀ ದೇಶ – ರಾಜ್ಯವೇ ತಲೆತಗ್ಗಿಸುವ ವಿಚಾರವಾಗಿದೆ, ಈ ಕೃತ್ಯ ಮಾಡಿದವನಿಗೆ ಗಲ್ಲಿಗೆ ಏರಿಸಲಿ, ನಾವು ಪೋಷಕರ ಜೊತೆ ನಿಲ್ತೇವೆ. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡಬೇಕು, ಇಲ್ಲಿ ರಾಜಕೀಯ ಬೇಡ. ಇವತ್ತು ಜೈಲಿಗೆ ಹೋಗ್ತಾನೆ, 5-6 ವರ್ಷ ಇರ್ತಾನೆ. ಒಳ್ಳೆ ಊಟ, ತಿಂಡಿ ಹಾಕ್ತಾರೆ, ಮತ್ತೆ ಬರ್ತಾನೆ ಹಾಗೇ ಆಗುವುದು ಬೇಡ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ನೊಂದವರನ್ನು ಭೇಟಿಯಾಗಿ ಸಾಂತ್ವನ ಹೇಳಲು ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇರಬೇಕು, ಕೇವಲ ಅಧಿಕಾರಕ್ಕಾಗಿ ಬರಬಾರದು ಎಂದು ಸಂಸದೆ ಸುಮಲತಾ ಹೆಸರು ಬಳಸದೇ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಎಂಪಿ, ಎಂಎಲ್ಎ, ಮಿನಿಷ್ಟರ್ ಎಂದು ಇರಬಾರದು, ಅದೇ ರಾಜಕಾರಣ ಅಲ್ಲ, ನೊಂದವರ ಜೊತೆಗೆ ನಾವು ನಿಲ್ಲಬೇಕು, ಅದೇ ಧರ್ಮ. ಅದನ್ನ ಮಾಡಲಿಲ್ಲ ಅಂದರೆ ಹೇಗೆ, ಅದು ಅವರ ಮನಸ್ಸಿನಲ್ಲಿರಬೇಕು ಎಂದರು.
ಜಿಲ್ಲಾಡಳಿತಕ್ಕೆ ನೊಂದವರ ಅಕ್ರಂದನಕ್ಕಿಂತ ಕುಂಭಮೇಳವೇ ಹೆಚ್ಚಾಗಿದೆ
ಘಟನೆಯಿಂದ ಇಡೀ ಮಳವಳ್ಳಿ ತಾಲ್ಲೂಕಿನ ಜನತೆ ದುಃಖದಲ್ಲಿ ಮುಳುಗಿದೆ, ಆದರೆ ಇಡೀ ಮಂಡ್ಯ ಜಿಲ್ಲಾಡಳಿತ ಘಟನೆ ಬಗ್ಗೆ ಕ್ರಮವಹಿಸದೇ ಕುಂಭಮೇಳ ಮಾಡ್ತಿದೆ. ಸಂತ್ರಸ್ಥ ಕುಟುಂಬಕ್ಕೆ ಜಿಲ್ಲಾಧಿಕಾರಿ ಬಂದು ಸಾಂತ್ವನ ಹೇಳಿಲ್ಲ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.
ಇವತ್ತು ನಿಖಿಲ್ ಕುಮಾರಸ್ವಾಮಿರವರು ಬಂದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಬಾಲಕಿ ಮೇಲೆ ದೌರ್ಜನ್ಯ ಮಾಡೊರೋ ವ್ಯಕ್ತಿಗೆ ಗಲ್ಲುಶಿಕ್ಷೆ ಆಗಬೇಕು. ಈ ವಿಚಾರವಾಗಿ ಅಸೆಂಬ್ಲಿಯಲ್ಲಿ ಮಾತನಾಡ್ತುತ್ತೇನೆ. ಕೇಂದ್ರ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಕಾನೂನು ತಿದ್ದುಪಡಿ ಮಾಡಿ ಕ್ರಮವಹಿಸಬೇಕು ಎಂದರು.
ಇಂತಹ ಘಟನೆ ನಡೆಯಬಾರದಿದ್ದು, ಆದರೆ ನಡೆದು ಬಿಟ್ಟಿದೆ, ಎಂತಹ ಕೃತ್ಯಗಳು ಮುಂದೆಂದು ನಡೆಯದಿರಲಿ, ನಿಮ್ಮ ನೋವು ನನಗೆ ಅರ್ಥವಾಗುತ್ತದೆ, ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿ ಕೊಡಲು ಹೋರಾಟ ಮಾಡುತ್ತೇನೆ ಎಂದು ನುಡಿದರು.
ಆರೋಪಿಯನ್ನು ಗಲ್ಲಿಗೆ ಹಾಕಿ
ಮುಗ್ದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಂದ ಆರೋಪಿಯನ್ನು ಗಲ್ಲಿಗೆ ಹಾಕಬೇಕು, ಇದಕ್ಕಾಗಿ ನಮಗೆ ಸಹಾಯ ಮಾಡಿ ಎಂದು ಬಾಲಕಿಯ ಕುಟುಂಬದವರು ನಿಖಿಲ್ ಕುಮಾರಸ್ವಾಮಿ ಅವರ ಬಳಿ ಬೇಡಿ ಕೊಂಡರು.
ಇಂತಹ ಹೀನ ಕೃತ್ಯವೆಸಗಿದ ಆತ ಬದುಕಬಾರದು, ಅವನನ್ನು ಸರ್ಕಾರ ಜೈಲಿನಲ್ಲಿಟ್ಟು ಪೋಷಿಸುವುದು, ಬೇಡ, ಅವನನ್ನು ನೇಣಿಗೆ ಹಾಕಬೇಕೆಂದು ಆಗ್ರಹಿಸಿದರು.




