ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಅನಿರ್ಧಿಷ್ಟಾವಧಿ ಹೋರಾಟದ 6 ನೇ ದಿನದಂದು ಮಂಡ್ಯನಗದ ಕಾಳಿಕಾಂಭ ಶ್ರಮಿಕ ನಗರದ ಸರ್ವೆ ನಂ.843-44 ರಲ್ಲಿನ 20 ಕುಂಟೆ ಜಾಗವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಆರ್.ಟಿ.ಸಿ ಇಂಡೀಕರಣ ಮಾಡಿ ಹಸ್ತಾಂತರಿಸಲಾಯಿತು.
ಆರ್.ಟಿ.ಸಿ ಇಂಡೀಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಹೋರಾಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿ ಶ್ರಮಿಕರು, 20 ವರ್ಷಗಳ ತಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯದ ಗೆಲುವು ಸಿಕ್ಕಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಂಘಟಕರಿಗೂ, ಮಂಡ್ಯದ ಎಲ್ಲಾ ಶ್ರಮಿಕ ನಗರದ ಮುಖಂಡರು, ನಿವಾಸಿಗಳಿಗೆ ಮತ್ತು ಅಂದಿನಿಂದ ಇಲ್ಲಿನತನಕ ನಿರಂತರ ಹೋರಾಡಿದ ಕರ್ನಾಟಕ ಜನಶಕ್ತಿ ಸಂಘಟನೆ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಮತ್ತು ಹಿತೈಷಿಗಳು, ಪೊಲೀಸ್ ಇಲಾಖೆ, ಮಾಧ್ಯಮಗಳು ಹಾಗೂ ಪತ್ರಕರ್ತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿ ದರು.

ಇಲ್ಲದೇ ಹಲವು ದಶಕಗಳ ಈ ಹೋರಾಟಕ್ಕೆ ಕೈಜೋಡಿಸಿ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ಮಹಿಳಾ ಮುನ್ನಡೆಯ ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತ ಡಾ.ವಾಸು ಅವರ ಶ್ರಮದಿಂದ ಇತಂಹ ಗೆಲುವು ಸಾಧ್ಯವಾಗಿದೆ ಎಂದು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
ಬಡಜನರ ಪರವಾಗಿ ಎರಡು ಬಾರಿ ತಿರ್ಪು ನೀಡಿದ ಎಂ ನಾಗಪ್ರಸ್ಸನ್ನ ನ್ಯಾಯಧೀಶರ ಪೀಠವು ಸಂವಿಧಾನದ ಹಕ್ಕುಗಳನ್ನು ಎತ್ತಿ ಹಿಡಿದಿರುವುದರಿಂದ ಕಾಳಿಕಾಂಭದ ಶ್ರಮಿಕ ಜನರಿಗೆ ಗೆಲುವು ದೊರಕಿದೆ. ಕೊಳಗೇರಿ ಅಭಿವೃದ್ದಿ ಮಂಡಳಿಯ ವಕೀಲರಾದ ಎಂ.ಬಿ ಶ್ರೀಕಾಂತ್ ಹಾಗೂ ನಮ್ಮ ಪ್ರಗತಿಪರ ವಕೀಲರಾದ ಕ್ಲೀಪ್ಟನ್ ಅವರ ವಾದದಿಂದ ಎರಡು ಭಾರಿ ಕಾಳಿಕಾಂಭ ಪ್ರಕರಣದಲ್ಲಿ ಶ್ರಮಿಕರಿಗೆ ಗೆಲುವು ದೊರೆತಿದೆ ಎಂದು ಹೋರಾಟಗಾರರು ಸ್ಮರಿಸಿದರು.
ಈ ಸಂದರ್ಭದಲ್ಲಿ ಭೂಮಿ ವಸತಿ ಹೋರಾಟ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು, ಜಾಗೃತ ಕರ್ನಾಟಕದ ಸಂಚಾಲಕರಾದ ಸಂತೋಷ್ ಜಿ., ಎನ್.ನಾಗೇಶ್, ಕೃಷ್ಣಪ್ರಕಾಶ್, ಸುಬ್ರಮಣ್ಯ,ನಗರಕೆರೆ ಜಗದೀರ್ಶ, ವಕೀಲರಾದ ..ಟಿ ವಿಶ್ವನಾಥ್, ದಸಂಸ ಮುಖ್ಯಸ್ಥ ಗುರುಪ್ರಸಾದ್ ಕೆರಗೊಡು, ವೆಂಕಟಗಿರಿಯಯ್ಯ, ಮಹಿಳಾ ಮುನ್ನಡೆಯ ಪೂರ್ಣಿಮ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಕಮಲ, ಶಿಲ್ಪ, ಹೋರಾಟಗಾರರಾದ ಎಂ.ಬಿ ನಾಗಣ್ಣ ಗೌಡ, ಮುಖಂಡರಾದ ಪ್ರಕಾಶ್, ಶಿವಣ್ಣ, ಎಸ್ ರಾಜು, ಜನಾರ್ಧನ್ ಇಲಿಯಾಜ್ ಪಾಷ ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.
ಹೋರಾಟದದಲ್ಲಿ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡರಾದ ಸುಮತಿ, ಶೈಲಜಾ, ಜ್ಯೋತಿ, ಮುತ್ತಮ್ಮ, ಮಾದೇವಿ, ಸುಬ್ರಮಣಿ, ಗೋಪಾಲ್, ಶಿವಲಿಂಗಣ್ಣ, ನಿಂಗಮ್ಮ ಸೇರಿದಂತೆ ಅನೇಕ ಸ್ಥಳೀಯ ಹಾಗೂ ಎಲ್ಲಾ ಶ್ರಮಿಕ ನಗರದ ಮುಖಂಡರು ಭಾಗವಹಿಸಿ ಗೆಲವು ತಂದುಕೊಟ್ಟಿದ್ದಕ್ಕೆ ಅವರೆಲ್ಲರನ್ನು ಸ್ಮರಿಸಲಾಯಿತು.




