ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಂಧನವನ್ನು ಖಂಡಿಸಿ ಮಂಡ್ಯ ನಗರದಲ್ಲಿರುವ ಮಹಾವೀರ ವೃತ್ತದಲ್ಲಿ ಕರವೇ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಮಂಡ್ಯ ನಗರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು, ಕೂಡಲೇ ಬಂಧನದಲ್ಲಿರುವ ರಾಜ್ಯಾಧ್ಯಕ್ಷರನ್ನು ಕೂಡಲೇ ಬಿಡುಗಡೆ ಮಾಡಬೇಕು ಕನ್ನಡದಲ್ಲಿ ನಾಮಫಲಗಳನ್ನು ಅಳವಡಿಸುವಂತೆ ಕೇಳುವುದೇ ತಪ್ಪೇ, ಕರ್ನಾಟಕ ರಾಜ್ಯದಲ್ಲಿರುವ ವರ್ತಕರು ಮತ್ತು ವ್ಯಾಪಾರಸ್ಥರ ಮಳಿಗೆಗಳಲ್ಲಿ ಕನ್ನಡ ಅಕ್ಷರಗಳಲ್ಲಿ ನಾಮಫಲಗಳನ್ನು ಅಳವಡಿಸುವಂತೆ ಸರ್ಕಾರದ ಆದೇಶವಿದ್ದರೂ ಅಕ್ಷರಗಳನ್ನು ಬರೆಯದೆ ಇರುವುದನ್ನು ಖಂಡಿಸಿ ಜಾಗೃತಿ ಮೂಡಿಸಲು ಹೋದವರನ್ನು ಪೊಲೀಸರು ಬಂಧಿಸಿರುವುದು ಅಕ್ಷಮ್ ಅಪರಾಧ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಡಿ ಅಶೋಕ್, ಕಾಮಧೆನು ರಮೇಶ್, ರೈತ ಮುಖಂಡ ಚಂದ್ರಶೇಖರ್ ಮತ್ತಿತರರು ಇದ್ದರು.




