Wednesday, June 12, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಡ್ಯ ತಾಲ್ಲೂಕಿನ ಸುಂಡಹಳ್ಳಿ ಸಮೀಪದ ಕಾವೇರಿ ಪದವಿ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕಾವೇರಿ ಎಜುಕೇಷನ್ ಮತ್ತು ರಿಸರ್ಜ್ ಟ್ರಸ್ಟ್‌ನ ಅಧ್ಯಕ್ಷ ಡಾ.ಹೆಚ್.ಪಿ.ರಾಜು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು ಹರಿದು ಹಂಚಿಹೋಗಿತ್ತು. ಕನ್ನಡಿಗರೆಲ್ಲ ಒಂದಾಗಬೇಕು ಎಂಬ ಕೂಗು 1880ರಲ್ಲಿ ಪ್ರಾರಂಭವಾಯಿತು. 1928 ರಲ್ಲಿ ಬೆಳಗಾವಿಯ ಅಧಿವೇಶನದಲ್ಲಿ ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ಕನ್ನಡ ನಾಡು ಎಂಬ ನಾಡಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ಸ್ವತಂತ್ರ ಪೂರ್ವದಲ್ಲಿ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡಿಗರೆಲ್ಲಾ ಒಗ್ಗೂಡಬೇಕೆಂಬ ಕೂಗು ರೂಪುಗೊಂಡಿತ್ತು ಎಂದು ಸ್ಮರಿಸಿದರು.

ಕನ್ನಡ ಧ್ವಜದ ಬಣ್ಣ ಹಳದಿ ಆರೋಗ್ಯ ಮತ್ತು ಶಾಂತಿಯನ್ನು ಸೂಚಿಸಿದರೆ, ಕೆಂಪು ಧೈರ್ಯ ಹಾಗೂ ಅಭಿವೃದ್ಧಿಯನ್ನು ಸೂಚಿಸುತ್ತದೆ, ಕನ್ನಡ ಧ್ವಜದ ಬಣ್ಣ ಹಳದಿ ಮತ್ತು ಕೆಂಪು ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾದ ಅರಿಶಿನ ಮತ್ತು ಕುಂಕುಮವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಶ್ರೀಕಂಠಪ್ಪ.ಎ.ಎಸ್ ಮಾತನಾಡಿ, ಕುವೆಂಪುರವರ ‘ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ನುಡಿಯಂತೆ ವಿದ್ಯಾರ್ಥಿಗಳೆಲ್ಲರೂ ಶ್ರೇಯೋಭಿವೃದ್ಧಿಯನ್ನು ದೇಶ ವಿದೇಶಗಳಲ್ಲಿ ಎಲ್ಲಿ ಹೋದರೂ ಕನ್ನಡದ ಅಭಿಮಾನ ಹೊಂದಿರಬೇಕೆಂದು ಹೇಳಿದರು.

ಉಪಪ್ರಾಂಶುಪಾಲ ಡಾ.ಆರ್.ಮಂಜುನಾಥ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!