ಬಿಜೆಪಿ ಪಕ್ಷವು ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳಿಕೊಂಡಿದೆ, ಆದರೆ ತನ್ನ ನೀತಿ-ನಿಯಮಗಳ ಮೂಲಕ ನಿಜವಾಗಿಯೂ ಕಿಸಾನ್ ಮುಕ್ತ ಮಾಡಲು ಹೊರಟಿದೆ ಎಂದು ರೈತ ನಾಯಕಿ ನಂದಿನಿ ಜಯರಾಂ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತಸಂಘವು ಬುಧವಾರ ನಡೆಸಿದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತರ ಮಕ್ಕಳಿಗೆ ಹೆಣ್ಣು ಸಿಗ್ತೀಲ್ಲ, ಅಂತ ಪರಿಸ್ಥಿತಿ ನಿರ್ಮಾಣವಾಗಿದೆ, ಆರ್ಥಿಕವಾಗಿ ಅಧೋಗತಿಗೆ ಇಳಿದಿದ್ದೇವೆ, ಇದಕ್ಕೆ ನಮ್ಮನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಕಾರಣವಾಗಿವೆ. ಒಂದು ಅಂದಾಜಿನ ಪ್ರಕಾರ 2000ದಿಂದ 2016ರವರೆಗೆ ದೇಶದಲ್ಲಿ ರೈತರು 45 ಲಕ್ಷ ಕೋಟಿ ರೂ.ಗಳ ನಷ್ಟ ಅನುಭವಿಸಿದ್ದಾರೆ, ಇದಕ್ಕೆ ಸರ್ಕಾರಗಳೇ ಕಾರಣವೆಂದರು.




