Thursday, November 19, 2026

ಪ್ರಾಯೋಗಿಕ ಆವೃತ್ತಿ

ಅಪಘಾತ ಪ್ರಕರಣ| ನ್ಯಾಯಾಲಯಕ್ಕೆ ದೋಷಪೂರಿತ ಮಾಹಿತಿ ಸಲ್ಲಿಕೆ: ಆರೋಪ

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣದಲ್ಲಿ ಸಕಾಲಿಕ ಕಾನೂನುಕ್ರಮ ಕೈಗೊಳ್ಳದೇ, ಮದ್ಯಪಾನ ಮಾಡಿ, ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ, ಸಹ ಪ್ರಯಾಣಿಕರು ಹಾಗೂ ಚಿಕಿತ್ಸೆ ನೀಡಿದ್ದ ಮಂಡ್ಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರೊಂದಿಗೆ ಶಾಮೀಲಾಗಿ ಪೊಲೀಸರು ನ್ಯಾಯಾಲಯಕ್ಕೆ ದೋಷ ಪೂರಿತ ಮಾಹಿತಿ ಸಲ್ಲಿಸಿದ್ದಾರೆಂದು ವಕೀಲ ಕೆ.ಎಲ್.ಭಾನುಪ್ರಕಾಶ್ ಆರೋಪಿಸಿದರು.

ಮದ್ಯಪಾನ ಮಾಡಿರುವ ಬಗ್ಗೆ ಯಂತ್ರದ ಮೂಲಕ ಪರೀಕ್ಷೆ ನಡೆಸಿದಾಗ ದಾಖಲಾದ ಮಾಹಿತಿ

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸರು ಮದ್ಯಪಾನ ಪತ್ತೆ ಪರೀಕ್ಷೆಯ ಸಾಕ್ಷ್ಯವನ್ನು ನಾಶಪಡಿಸಿ, ಹಲವು ಕಲಂಗಳನ್ನು ಕೈಬಿಟ್ಟು, ಕನಕಪುರ ನ್ಯಾಯಾಲಯಕ್ಕೆ ಸುಳ್ಳು ಹಾಗೂ ದೋಷಪೂರಿತ ವೈದ್ಯಕೀಯ ವರದಿ ಸಲ್ಲಿಸಿ ಅನ್ಯಾಯ ಮಾಡಿದ್ದಾರೆ.

ಈ ಬಗ್ಗೆ ನಮ್ಮ ಗಮನಕ್ಕೆ ಬಂದ ತಕ್ಷಣ ಅವರ ಮೇಲಿನ ಅಧಿಕಾರಿಗಳಿಗೆ ಹಾಗೂ ರಾಮನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ಸಮಯದಲ್ಲಿ ಸಂಚಾರಿ ದೂರವಾಣಿಯಿಂದ ವಾಟ್ಸ್ ಆಪ್ ಹಾಗೂ ಬರಹ ಸಂದೇಶದ ಮೂಲಕ ಮಾಹಿತಿ ನೀಡಿದ್ದು ನಂತರ ನೋಂದಾಯಿತ ಅಂಚೆಯ ಮೂಲಕ ಮಾನ್ಯ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರನ್ನು ರವಾನಿಸಿದ್ದು, ತದನಂತರ ಸಂಬಂಧಪಟ್ಟ ಕನಕಪುರ ಮಾನ್ಯ ನ್ಯಾಯಾಲಯದಿಂದ ಪ್ರಕರಣದ ದಾಖಲೆಗಳನ್ನು ಪಡೆದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಖುದ್ದು ಹಾಜರಾಗಿ ಈ ಪ್ರಕರಣದ ದಾಖಲೆಗಳ ಸಮೇತ ಲಿಖಿತವಾಗಿ ದೂರು ಸಲ್ಲಿಸಿದರೂ ಸಹ, ಸಕಾಲದಲ್ಲಿ ಕಾನೂನಿನ ರೀತ್ಯ ಸೂಕ್ತ ವಿಚಾರಣೆ, ತನಿಖೆ ಕೈಗೊಂಡಿಲ್ಲ ಎಂದು ದೂರಿದರು.

ಆದ್ದರಿಂದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಸಂಬಂಧಪಟ್ಟ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ