Wednesday, November 18, 2026

ಪ್ರಾಯೋಗಿಕ ಆವೃತ್ತಿ

ಜ್ಞಾನವನ್ನು ಕೌಶಲ್ಯಾಧಾರಿತ ಮಾಡಿಕೊಳ್ಳುವ ಅಗತ್ಯವಿದೆ : ರವಿಶಂಕರ್ ಆರಾಧ್ಯ

ಪ್ರಸ್ತುತ ದಿನಗಳಲ್ಲಿ ಜ್ಞಾನಕ್ಕೆ ತಕ್ಕ ಉದ್ಯೋಗ ಮತ್ತು ಸಂಪಾದನೆ ದೊರೆಯಲಿದೆ. ನಾವು ನಮ್ಮ ಜ್ಞಾನವನ್ನು ಕೌಶಲ್ಯಾಧಾರಿತವಾಗಿ ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಬೆಂಗಳೂರಿನ ಪೆಂಟಗನ್ ಸ್ಪೇಸ್ ಸಂಸ್ಥಾಪಕ ಸಿಇಓ ರವಿಶಂಕರ್ ಆರಾಧ್ಯ ಅಭಿಪ್ರಾಯಿಸಿದರು.

ಮಂಡ್ಯದ ಕಾವೇರಿ ಶಿಕ್ಷಣ ಮತ್ತು ಸಂಶೋಧನಾ ಟ್ರಸ್ಟ್ ವತಿಯಿಂದ ಕಾವೇರಿ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ನಡೆದ ದೃಷ್ಠಿಕೋನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಕೆಲಸಕ್ಕೆ ಕೊರತೆ ಇಲ್ಲ, ಆದರೆ ಕೆಲಸಕ್ಕೆ ತಕ್ಕಂತೆ ಅರ್ಹತೆ ಬಹಳ ಮುಖ್ಯವಾಗಿದೆ. ಕೌಶಲ್ಯಾಧಾರಿತ ಉದ್ಯೋಗಗಳು ಹೆಚ್ಚಿವೆ. ಕೌಶಲ್ಯಾಧಾರಿತ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚೀನಾದಲ್ಲಿನ ಆರ್ಥಿಕ ಅಸಮತೋಲನ ಮತ್ತು ಹಲವಾರು ಕಾರಣಗಳಿಂದಾಗಿ ಬಹುರಾಷ್ಟ್ರೀಯ ಕಂಪನಿಗಳು ಅಲ್ಲಿಂದ ಕಾಲ್ತೆಗೆಯುತ್ತಿವೆ. ಅಂತಹ ಬಹುರಾಷ್ಟ್ರೀಯ  ಕಂಪನಿಗಳು ಭಾರತದಲ್ಲಿ ತಳವೂರುತ್ತಿವೆ. ಕರ್ನಾಟಕದಲ್ಲೂ ಸಹ ಹೆಚ್ಚು ಕಂಪನಿಗಳು ಸ್ಥಾಪನೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಾನು ಬಹುರಾಷ್ಟ್ರೀಯ ಕಂಪನಿಗಳಿಗೆ ತಕ್ಕಂತೆ ಅರ್ಹತೆಯನ್ನು ಗಳಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಯುವಶಕ್ತಿ ನಮ್ಮಲ್ಲಿ ಹೆಚ್ಚಿದೆ. ಆದರೆ ಕೆಲಸಕ್ಕೆ ತಕ್ಕಂತಹ ಅರ್ಹತೆಯ ಕೊರತೆ ಇದೆ. ಇಂಜಿನಿಯರಿಂಗ್, ತಾಂತ್ರಿಕ ಪದವಿಯನ್ನು ಪಡೆಯಬಹುದು. ಆದರೆ ಪರಿಣಿತಿಯನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಎಲ್ಲ ವಿಚಾರಗಳಿಗೂ ಸಂಬಂಧಿಸಿದಂತೆ ಪರಿಣಿತಿಯನ್ನು ಪಡೆದುಕೊಂಡಲ್ಲಿ ನಾವು ಹೆಚ್ಚಿನ ಸಂಪಾದನೆ ಮಾಡಬಹುದಾಗಿದೆ ಎಂದು ಹೇಳಿದರು.

ಬೆಂಗಳೂರಿನ ಎಷಿಯಾ ಸಂಸ್ಥೆ ಮುಖ್ಯಸ್ಥ ಮಂಜುನಾಥ್ ಗೊರೂರು ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಕಾಲಘಟಕ್ಕೆ ತಕ್ಕಂತೆ ತಾಂತ್ರಿಕತೆಯನ್ನು ಬೆಳೆಸಿಕೊಳ್ಳಬೇಕಿದೆ. ಕಾಲ ಕಾಲಕ್ಕೆ ಅಪ್‌ಡೇಟ್ ಆಗುತ್ತಾ ಸಾಗಬೇಕು. ಇದರಿಂದ ನಮ್ಮ ಭವಿಷ್ಯವೂ ಉಜ್ವಲವಾಗುತ್ತದೆ ಎಂದು ಹೇಳಿದರು.

ವಿಪ್ರೋ, ಡಲಾಯ್, ಟಾಟಾ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಉದ್ಯೋಗಗಳು ದೊರೆಯುತ್ತವೆ. ಆದರೆ ಅವರಿಗೆ ಉದ್ಯೋಗಿಗಳ ಅಗತ್ಯತೆ ಇದೆ. ಆದರೆ ತಕ್ಕಂತ ಅರ್ಹತೆಯ ಕೊರತೆಯೂ ಇದೆ. ಈ ಹಿನ್ನೆಲೆಯಲ್ಲಿ ಪದವಿ ಪಡೆಯುವುದರ ಜೊತೆಗೆ ಅರ್ಹತೆಯನ್ನೂ ಗಳಿಸುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.

ಸಂಸ್ಥೆಯ ಕಾರ‍್ಯದರ್ಶಿ ಪ್ರೊ.ನಾಗೇಂದ್ರ ಮಾತನಾಡಿ, ಸಿನಿಮಾ ನಟರು, ಕ್ರಿಕೆಟ್ ಆಟಗಾರರನ್ನು ಮಾದರಿಯನ್ನಾಗಿಟ್ಟುಕೊಳ್ಳುವ ಬದಲು ಸುಧಾಮೂರ್ತಿಯವರಂತಹ ಸಾಧಕರನ್ನು ಮಾದರಿ ವ್ಯಕ್ತಿಗಳನ್ನಾಗಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಡಾ. ಎಚ್.ಪಿ.ರಾಜು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಡಾ. ಮಂಜುನಾಥ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ