Friday, October 25, 2024

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನ| ಕೇಂದ್ರ ಕಸಾಪಕ್ಕೆ ಕವಿ ಕೆ.ಪಿ.ಮೃತ್ಯುಂಜಯ ಸಲಹೆ

ಕೆ.ಪಿ.ಮೃತ್ಯುಂಜಯ

ಮಂಡ್ಯದಲ್ಲಿ ಡಿಸೆಂಬರ್ 20 , 21 ಮತ್ತು 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಯಾರನ್ನು ಆರಿಸಬೇಕೆಂಬ ಕುರಿತು ಅಭಿಪ್ರಾಯಗಳು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ , ಇಂದಿನ ( ಅ. 25 ) ಪ್ರಜಾವಾಣಿ ಯಲ್ಲಿ ಬಂದಿರುವ ಸುದ್ದಿ ( ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ) ಹೀಗಿದೆ : ಸಮ್ಮೇಳನದ ಅಧ್ಯಕ್ಷತೆ ಬಹುಪಾಲು ಮಹಿಳಾ ಸಾಹಿತಿಗೆ ದಕ್ಕಲಿದೆ . ವೀಣಾ ಶಾಂತೇಶ್ವರ , ವೈದೇಹಿ , ಮಾಲತಿ ಪಟ್ಟಣಶೆಟ್ಟಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ .

ಗಮನೀಯ ಸಂಗತಿ ಎಂದರೆ : ಮಂಡ್ಯದಲ್ಲಿ ಮೊಟ್ಟ ಮೊದಲ ಬಾರಿಗೆ 1974 ರಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಂದಿರುವುದು – ಸಮ್ಮೇಳನದ ಇತಿಹಾಸದಲ್ಲೇ ಮೊದಲಿಗೆ – ಮಹಿಳಾ ಸಾಹಿತಿ ಜಯದೇವಿತಾಯಿ ಲಿಗಾಡೆ ಅವರಿಗೆ . ಎರಡನೆಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಚದುರಂಗ ಅವರು‌. ಅದು 1994.

ಮೂರು ದಶಕಗಳ ಬಳಿಕ ನಡೆಯುತ್ತಿರುವ ಈ ಸಮ್ಮೇಳನದ ಅಧ್ಯಕ್ಷ ಪಟ್ಟವನ್ನು ಮಹಿಳಾ ಸಾಹಿತಿಗಿಂತ ಪುರುಷ ಸಾಹಿತಿಗೇ ನೀಡುವುದು ಉಚಿತ.

ಹಾಗೆ ನೀಡುವುದಾದಲ್ಲಿ ನನ್ನ ಆಯ್ಕೆ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ನಮ್ಮ ಕಾಲದ ಶ್ರೇಷ್ಠ ಕವಿ‌ ಎಚ್ .ಎಸ್.ಶಿವಪ್ರಕಾಶ ಅವರು. ಕನ್ನಡ ಸಾಹಿತ್ಯ ಪರಿಷತ್ತು ಈ ಹೆಮ್ಮೆಯ ಕವಿಯತ್ತ ಗೌರವ ಪೂರ್ಣ ಗಮನವನ್ನು ಹರಿಸಿ ಮುಕ್ತ ಮನಸ್ಸಿನಿಂದ ಅಧ್ಯಕ್ಷ ಪದವಿಗೆ ಇವರನ್ನು ಆರಿಸಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!