Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನರೇಂದ್ರ ಆಯ್ಕೆ

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ 3ನೇ ಬಾರಿಗೆ ಕೆ.ಪಿ ನರೇಂದ್ರ, ಉಪಾಧ್ಯಕ್ಷ ರಾಗಿ ಚಿಕ್ಕಯ್ಯ ಅವಿರೋಧ ಆಯ್ಕೆಯಾದರು.

2025 – 30 ನೇ ಸಾಲಿನ ಜ 26 ರಂದು ನಡೆದ ಚುನಾವಣೆಯಲ್ಲಿ 12 ನಿರ್ದೇಶಕರು ಅವಿರೋಧವಾಗಿದ್ದರು.
ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. 12 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಕೆ.ಪಿ ನರೇಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ಚಿಕ್ಕಯ್ಯ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಈ ವೇಳೆ ಸತತ 3 ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪಿ ನರೇಂದ್ರ ಮಾತನಾಡಿ, 60 ಕೋಟಿ ರೂ ವಹಿವಾಟುವನ್ನು 100 ಕೋಟಿ ಗೆ ಹೆಚ್ಚಿಸುವ ಗುರಿ ಹೊಂದಿದ್ದೇನೆ ಜೊತೆಗೆ ತಾಲ್ಲೂಕಿಗೆ ನಂ 1 ಪತ್ತಿನ ಸಹಕಾರ ಸಂಘವಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಸಹಕಾರ ಸಂಘ ಮಾಡುವ ಯೋಜನೆ ಆಗಿದೆ. ಸಂಘದ ಸಹಕಾರರ ಸೇರದಾರರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ವೇಳೆ ಉಪಾಧ್ಯಕ್ಷ ಚಿಕ್ಕಯ್ಯ, ನಿರ್ದೇಶಕರಾದ ಅಜಿಜ್ ಖಾನ್, ಮನೋಹರ್, ನಿಂಗೇಗೌಡ, ಜಗದೀಶ್, ಆನಂದ್ ಕುಮಾರ್, ಯಶೋಧ, ಜಯಶೀಲಾ, ಸಿದ್ದರಾಜು, ಮಾಲಾಶ್ರೀ, ಅಲ್ತಾಫ್ ಮೆಹದಿ. ಕಾರ್ಯದರ್ಶಿ ಶಿವಲಿಂಗ ಸೇರಿದಂತೆ ಹಲವರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ