ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಹೆಚ್.ಟಿ.ಮಂಜು 79,844 ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದಾರೆ. 21,905 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಕಾಂಗ್ರೆಸ್ ನ ಬಿ.ಎಲ್.ದೇವರಾಜು 57,939 ಮತಗಳನ್ನು ಪಡೆಯುವ ಮೂಲಕ ಸೋಲನಪ್ಪಿದ್ದಾರೆ. ಇನ್ನೂ ಬಿಜೆಪಿಯ ಸಚಿವ ನಾರಾಯಣಗೌಡ ಕೇವಲ 37,790 ಮತಗಳನ್ನು ಪಡೆಯುವ ಮೂಲಕ 3ನೇ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ.




