Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕೆ.ಆರ್.ಎಸ್ ಕಾರ್ಯಕರ್ತನಿಗೆ ಇ.ಓ ಬೆದರಿಕೆ ಆರೋಪ : ದೂರು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಪಂಚಾಯತಿಯ ಇ.ಓ. ಶ್ರೀನಿವಾಸ್ ಅವರು ಇಂದು(ಶುಕ್ರವಾರ) ಮುಂಜಾನೆ ತಮಗೆ ಮೊಬೈಲ್ ಕರೆ ಮಾಡಿ ಸರ್ಕಾರಿ ಕಚೇರಿಗಳಿಗೆ ಇನ್ನು ಮುಂದೆ ಭೇಟಿ ನೀಡಿ ದಾಂಧಲೆ ಮಾಡಿದರೆ ನಾನೇ ಖುದ್ದಾಗಿ ಡಿ.ಜಿ/ಐಜಿ ಅವರಿಗೆ ದೂರನ್ನು ಸಲ್ಲಿಸಿ ಎಫ್.ಐ.ಆರ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಕೆ.ಆರ್.ಎಸ್ ಪಕ್ಷದ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ದೂರಿದ್ದಾರೆ.

ಅಧಿಕಾರಿಯ ಈ ಬೆದರಿಕೆಯನ್ನು ಉಲ್ಲೇಖಿಸಿ ಅವರು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು, ಇ.ಓ ಶ್ರೀನಿವಾಸ್ ನಮಗೆ ಡಿಜಿ, ಐಜಿಯವರಿಂದ ಆದೇಶ ಅಥವಾ ಸುತ್ತೋಲೆ ಬಂದಿದೆ, ನೀವು ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಇನ್ನು ಮುಂದೆ ಮಳವಳ್ಳಿ ತಾಲ್ಲೂಕು ಕಚೇರಿಗಳಿಗೆ ಹಾಗೂ ಬಿ.ಇ.ಓ. ಕಚೇರಿಗಳಿಗೆ ಬಂದು ಧಾಂದಲೆ ಮಾಡಿದರೆ ನಿಮ್ಮ ವಿರುದ್ಧ ಮೊದಲಿಗೆ ದೂರು ದಾಖಲಿಸುತ್ತೇನೆಂದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇ.ಓ ಶ್ರೀನಿವಾಸ್ ಅವರು ಪೊಲೀಸ್ ಐ.ಜಿ ಆದೇಶವೆಂದು ಹೇಳುತ್ತಿರುವುದು ಮೂಲದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾ ಪೊಲೀ ಸ್‌ ವರಿಷ್ಠಾಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ಕಳುಹಿಸಿರುವ ಜ್ಞಾಪನ ಪತ್ರವಷ್ಟೇ, ಹಾಗಾಗಿ ಆ ಜ್ಞಾಪನ ಪತ್ರ ಆ ಜಿಲ್ಲೆಗಷ್ಟೇ ಸೀಮಿತವಾಗಿರುತ್ತದೆ ಎಂದು ಭಾವಿಸಿರುತ್ತೇವೆ. ಹಾಗಾಗಿ ಇ.ಓ ಅಧಿಕಾರಿಯು ತನ್ನ ಕಾರ್ಯವ್ಯಾಪ್ತಿಯನ್ನ ಅರಿತುಕೊಳ್ಳದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.

ಸಾರ್ವಜನಿಕರು ಅಥವಾ ಸಾರ್ವಜನಿಕರಿಂದ ಬಂದ ದೂರಿನನ್ವಯ ಕೆ.ಆರ್.ಎಸ್. ಪಕ್ಷದ ಪದಾಧಿಕಾರಿಗಳು ಸರ್ಕಾರಿ ಕಚೇರಿಗೆ ಭೇಟಿ ಮಾಡುತ್ತಾರೆ ಎನ್ನುವುದನ್ನ ಅರಿತುಕೊಳ್ಳದೆ, ಕಚೇರಿಗೆ ಭೇಟಿ ನೀಡಿದಂತ  ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನೆ ಮಾಡುವುದನ್ನೇ ಇವರು ಧಾಂದಲೆ ಎಂದು ಬಿಂಬಿಸಿ ಪೊಲೀಸ್ ರಿಗೆ ದೂರು ನೀಡಿ ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ಬೆದರಿಸುತ್ತಿತ್ತು, ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಇಲಾಖಾ ವಿಚಾರಣೆ ನಡೆಸಿ, ಅಮಾನತ್ತಿನಲ್ಲಿರಿಸಿ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ