Tuesday, November 24, 2026

ಪ್ರಾಯೋಗಿಕ ಆವೃತ್ತಿ

123.10 ಅಡಿ ತಲುಪಿದ KRS | 70 ಸಾವಿರ ಕ್ಯೂಸೆಕ್ ಒಳಹರಿವು; 52 ಸಾವಿರ ಕ್ಯೂಸೆಕ್ ಹೊರಕ್ಕೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಅಣೆಕಟ್ಟೆಯು  123.10 ಅಡಿ ತಲುಪಿದ್ದು, ಗರಿಷ್ಠ ಮಟ್ಟ 124.80 ಅಡಿಯನ್ನು ತಲುಪಲು 1 ಅಡಿಯಷ್ಟೇ ಬಾಕಿ ಇದೆ. ಅಣೆಕಟ್ಟೆಗೆ 70,850 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿರುವುದರಿಂದ ಅಣೆಕಟ್ಟೆಯ ಸುರಕ್ಷತೆ ದೃಷ್ಠಿಯಿಂದ 52,162 ಕ್ಯೂಸೆಕ್ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.

“>

 

ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕಾವೇರಿಯ ಉಪನದಿಗಳಾದ ಹೇಮಾವತಿ, ಹಾರಂಗಿ, ಕಬಿನಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಕೆ.ಆರ್.ಎಸ್ ನೀರಿನ ಮಟ್ಟ (ಜು.21 ರಾತ್ರಿ 8 ಗಂಟೆ ವೇಳೆಗೆ)

  • ಗರಿಷ್ಠ ಮಟ್ಟ : 124.80 ಅಡಿ
  • ಇಂದಿನ ನೀರಿನ ಮಟ್ಟ : 123.10 ಅಡಿ
  • ಗರಿಷ್ಟ ಸಾಮರ್ಥ್ಯ : 49.452 ಟಿ.ಎಂ.ಸಿ
  • ಇಂದಿನ ನೀರಿನ ಸಂಗ್ರಹ : 47.106 ಟಿ.ಎಂ.ಸಿ.
  • ಒಳಹರಿವು:  70,850 ಕ್ಯೂಸೆಕ್
  • ಹೊರ ಹರಿವು : 52,162 ಕ್ಯೂಸೆಕ್

ಇದರಿಂದಾಗಿ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಂಡ್ಯ ಜಿಲ್ಲಾಡಳಿತ ಸೂಚನೆ ನೀಡಿದೆ. ನೀರಾವರಿ ಅಧಿಕಾರಿಗಳು ಒಳಹರಿವಿನ ಮೇಲೆ ನಿಗಾ ಇಟ್ಟಿದ್ದು, ನದಿ ತಟದ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ