ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್’ಎಸ್ ಜಲಾಶಯದ ನೀರಿನ ಮಟ್ಟ 107.60 ಅಡಿಗೇರಿಕೆ ಕಂಡಿದ್ದು, 25,933 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಇಂದು ಮಂಗಳವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ ನೀರಿನ ಮಟ್ಟವು 107.60 ಗೆ ತಲುಪಿದೆ.
ಜಲಾಶಯದ ಗರಿಷ್ಠ ನೀರಿನಮಟ್ಟ 124.80 ಅಡಿಯಾಗಿದ್ದು, ಜಲಾಶಯ ಭರ್ತಿಗೆ 17 ಅಡಿಯಷ್ಟೇ ಬಾಕಿಯಿದೆ. ಜಲಾಶಯದಿಂದ ಕಾವೇರಿ ನದಿ ಹಾಗೂ ಅಚ್ಚುಕಟ್ಟು ನಾಲೆಗಳಿಗೆ 2289 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಸದ್ಯ ಜಲಾಶಯದಲ್ಲಿ 29.378 ಟಿಎಂಸಿ ನೀರಿನ ಸಂಗ್ರಹವಿದೆ.
ಹಾರಂಗಿ ಜಲಾಶಯವು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಕೆ ಆರ್ ಎಸ್ ಆಣೆಕಟ್ಟೆಯ ಒಳ ಹರಿವು ಗಣನೀಯ ಹೆಚ್ಚಳ ಕಂಡಿದೆ.




