Thursday, April 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಕ್ಷಯ ಮುಕ್ತ ಪಂಚಾಯಿತಿಗೆ ಕೈ ಜೋಡಿಸಿ: ನಾಗರಾಜು

2025 ಕ್ಕೆ ಆರೋಗ್ಯ ಇಲಾಖೆ ಕ್ಷಯ ಮುಕ್ತ ಕರ್ನಾಟಕ ಗುರಿ ಹೊಂದಿದ್ದು ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆಂದು ಗ್ರಾ ಪಂ ಅಧ್ಯಕ್ಷ ನಾಗರಾಜು ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಮುಂಡುಗದೊರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ “ಕ್ಷಯ ಮುಕ್ತ ಪಂಚಾಯತಿ ಅಭಿಯಾನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷಯ ಹಳೆ ಕಾಯಿಲೆಯಾಗಿದ್ದರು ಕ್ಷಯ ಲಕ್ಷಣ ಇರುವವರು ಪರೀಕ್ಷೆಗೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಕ್ಷಯ ಮುಕ್ತ ಪಂಚಾಯಿತಿ ಅಭಿಯಾನಕ್ಕೆ ಸಹಕರಿಸಬೇಕೆಂದು ಸಲಹೆ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಲ್ಲಿ ಬೇಕೆಂದರಲ್ಲಿ ಉಗಿಯಬಾರದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಿ,ಸಿಗರೇಟ್ ಸೇದಬಾರದು ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ಮಾತನಾಡಿ, ವಾರಕ್ಕಿಂತ ಹೆಚ್ಚು ಕೆಮ್ಮು ,ಸಂಜೆ ವೇಳೆ ಜ್ವರ ಬರುವುದು,ತೂಕ ಕಡಿಮೆ, ರಾತ್ರಿ ಬೆವರುವಿಕೆ ,ಹಸಿವಾಗದಿರುವುದು ಇಂತಹ ಲಕ್ಷಣಗಳು ಇದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು ಕ್ಷಯ ರೋಗ ಹರಡುವ ಬಗೆ ,ಪರೀಕ್ಷೆ ಮತ್ತು ಚಿಕಿತ್ಸೆ ಬಗ್ಗೆ ವಿವರಿಸಿ ಕ್ಷಯ ಮುಕ್ತ ಪಂಚಾಯಿತಿ ಮಾಡುವ ಸಂಕಲ್ಪ ಕೋರಿ ಕೈಜೋಡಿಸಿ ಕರ್ನಾಟಕ ಕ್ಷಯ ಮುಕ್ತ ವನ್ನಾಗಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಸುಗುಣ, ಪಿಡಿಒ ವಿಶಾಲಮೂರ್ತಿ, ಕ್ಷಯ ಮೇಲ್ವಿಚಾರಕ ಮಹೇಶ,ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ನೆಗೌಡ ,ಗ್ರಾ ಪಂ ಸದಸ್ಯರಾದ ಗೋವಿಂದರಾಜು, ಮಹಾಲಕ್ಷ್ಮಿ, ಮಂಜುಳಾ,ಸುನಂದಮ್ಮ, ಸೋಮಣ್ಣ,ಪದ್ಮ ಹಾಗೂ ಕಾರ್ಯದರ್ಶಿ ರಮ್ಯಾ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅನಿತಾ, ಶಶಿಕಲಾ ಸಮುದಾಯ ಆರೋಗ್ಯ ಅಧಿಕಾರಿ ರೂಪ,ಕಾವ್ಯ ಹಾಗೂ ಅಂಗನವಾಡಿ ಕಾರ್ಯಕರ್ತೆ ಪ್ರೇಮಾ ಕೆ, ಪವಿತ್ರಾ, ಪ್ರೇಮ ಡಿ, ಆಶಾ ಕಾರ್ಯಕರ್ತೆ ಗೀತಾ, ಕಲ್ಪನಾ, ಗಿರಿಜಾ, ರೂಪ, ಗೌರಮ್ಮ, ಸುಕನ್ಯಾ ಹಾಗೂ ಸಾರ್ವಜನಿಕರು,ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!