ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಜನರಿಂದ ಮನೆ ಕಂದಾಯ ಸುಲಿಗೆ ಮಾಡಲಾಗಿದೆ, ಅಲ್ಲದೇ ಒಂದೇ ಆಸ್ತಿಗೆ ಎರಡು ಐ.ಡಿ ಸೃಷ್ಟಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಶನಿವಾರ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿಯಲ್ಲಿ ಪಂಚತಂತ್ರ ದುರ್ಬಳಕೆ ಮಾಡಿರುವುದು ಮತ್ತು ಆಕ್ರಮವಾಗಿ ಖಾತೆ ಮಾಡಿರುವುದನ್ನು KRS ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಾಗ, ಪಿಡಿಓ ಅವರು ನನಗೆ ಗೊತ್ತೇ ಇಲ್ಲ ಎಂದು ಒಂದು ರೀತಿಯಲ್ಲಿ ಬೇಜಾವಾಬ್ದಾರಿತನ ಪ್ರದರ್ಶಿಸಿದ್ದಾರೆಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕೆ.ಜೆ , ಮದ್ದೂರು ತಾಲ್ಲೂಕು ಅಧ್ಯಕ್ಷ ಪ್ರಮೋದ ಎಸ್, ಪ್ರಧಾನ ಕಾರ್ಯದರ್ಶಿ ಮಹಾದೇವ, ಕಾರ್ಯದರ್ಶಿ ತಿಮ್ಮೆಗೌಡ ,ಹರೀಶ್ ಗೌಡ, ಪರಮೇಶ್, ಗ್ರಾಮಸ್ಥರಾದ ಗೌತಮ್, ಕೃಷ್ಣ, ಪುಟ್ಟರಾಜು, ಸಿದ್ದೇಶ್, ದೇಶಿಗೌಡ, ಶರತಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.




