Friday, November 20, 2026

ಪ್ರಾಯೋಗಿಕ ಆವೃತ್ತಿ

ಜನರಿಗಾಗಿ ಪ್ರಾಣ ಮುಡಿಪಾಗಿಡುವ ಕುಮಾರಣ್ಣ ಎಂಪಿ ಆಗಬೇಕು: ವಿಜಯೇಂದ್ರ

ಬಿಜೆಪಿ ಜೆಡಿಎಸ್‌ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ, ಸಚಿವರನ್ನ ಅಭ್ಯರ್ಥಿ ಮಾಡುವ ಯೋಜನೆಯಲ್ಲಿ ಕಾಂಗ್ರೆಸ್ ಇತ್ತು‌. ಯಾವುದೇ ಒಬ್ಬ ಮಂತ್ರಿ ಅಭ್ಯರ್ಥಿ ಆಗುವ ಧೈರ್ಯ ಮಾಡಲಿಲ್ಲ. ಆದ್ದರಿಂದ ಹಣವಂತ ವ್ಯಕ್ತಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ, ಇಂತಹ ಸಂದರ್ಭದಲ್ಲಿ ಜನರಿಗಾಗಿ ಪ್ರಾಣ ಮುಡಿಪಾಗಿಡುವ ಕುಮಾರಣ್ಣ ಎಂಪಿ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಂಡ್ಯನಗರದ ಖಾಸಗಿ ಹೋಟೇಲ್ ನಲ್ಲಿ ನಡೆದ ಮೈತ್ರಿ ಪಕ್ಷಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿದೆ. ರಾಜ್ಯಕ್ಕೆ ಧಾರುಣ ಪರಿಸ್ಥಿತಿ ಇದೆ. ಬರಗಾಲ ಇದೆ, ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಸಿಎಂ ಸಿದ್ದರಾಮಯ್ಯ ಜನರ ಸಮಸ್ಯೆಗಳಿಗೆ ಎಳ್ಳಷ್ಟು ಸ್ಪಂದಿಸುತ್ತಿಲ್ಲ. ಇಂತಹ ಮುಖ್ಯಮಂತ್ರಿ ಪಡೆದದ್ದು ದುರದೃಷ್ಟಕರ ಎಂದರು.

ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ.
ಕಾಂಗ್ರೆಸ್ ಪಕ್ಷ ದೂಳಿಪಟ ಮಾಡುವ ಕೆಲಸ ಮಾಡ್ತಾರೆ. ಕುಮಾರಸ್ವಾಮಿ, ದೇವೇಗೌಡರು ರಾಜ್ಯ ಪ್ರವಾಸ ಮಾಡ್ತಾರೆ. ಚುನಾವಣೆಯನ್ನು ಚುನಾವಣೆ ರೀತಿ ಮಾಡೋಣ ಮೈ ಮರೆಯುವುದು ಬೇಡ. ನಾವೇ ನಾಯಕರು, ಅಭ್ಯರ್ಥಿ ಅಂತಾ ತಿಳಿದು ಕೆಲಸ ಮಾಡಬೇಕು, ಚುನಾವಣೆ ಮುಗಿಯುವವರೆಗೂ ಕಾರ್ಯಕರ್ತರು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ