ಸ್ವಾಮಿ ವಿವೇಕಾನಂದದರು ಹೇಳಿದಂತೆ ಪಠ್ಯ ಪುಸ್ತಕದಲ್ಲಿನ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ತಮ್ಮ ಗುರುಗಳು, ತಂದೆ-ತಾಯಿಯರನ್ನು ನೋಡಿ ಕಲಿಯುವುದು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಎಂದು ವಿಧಾನ ಪರಿಷತ್ ಶಾಸಕ ಮರಿತಿಬ್ಬೇಗೌಡ ಹೇಳಿದರು.
ಮಂಡ್ಯ ನಗರದ ಸೆಂಟ್ ಜಾನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾ ಶಾಖೆ, ಇವರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ಶಿಕ್ಷಣ ಕಲಿಕೋತ್ಸವ ಮತ್ತು ಪಠ್ಯಧಾರಿತ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಡಾ.ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದರು ಹಾಗೂ ಇನ್ನಿತರ ಮಹನೀಯರು ಪಠ್ಯ ಪುಸ್ತಕದಲ್ಲಿ ಕಲಿಯುವುದರ ಜೊತೆ ಹೊರ ಪ್ರಪಂಚದಿಂದ ಕಲಿಯಬೇಕಿರುವ ವಿಷಯಗಳ ಬಗ್ಗೆ ತಿಳಿಸಿದ್ದಾರೆ ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅವರಷ್ಟು ಓದಿದ ಹಾಗೂ ಬರೆದಂತವರು ಇಡೀ ಭಾರತ ದೇಶದಲ್ಲಿ ಯಾರು ಇಲ್ಲ. ಭಾರತ ದೇಶದಲ್ಲಿ ಮೊದಲಿಗೆ ಡಾಕ್ಟರೇಟ್ ಪದವಿಯನ್ನು ಪಡೆದವರು ಹಾಗೂ ಭಾರತಕ್ಕೆ ಸಂವಿಧಾನವನ್ನು ತಂದು ಕೊಟ್ಟವರು ಅವರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸೆಂಟ್ ಜಾನ್ಸ್ ಪ್ರೌಢಶಾಲೆಯ ಫಾದರ್ ಲೂಥ್ ಪ್ರಸಾದ್, ಶಿಕ್ಷಣಾಧಿಕಾರಿ ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಮಲಿಂಗೇಗೌಡ, ಖಜಾಂಚಿ ಸಿ.ಕೆ ವಿಜಯ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀಕ್ಷಕರಾದ ನಂಜರಾಜು, ನಾಗೇಂದ್ರಮೂರ್ತಿ, ಜಾಕಿರ್ ಪಾಷ, ಲಕ್ಷ್ಮಿ, ಶಶಿಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು




