ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು,ಬಹುತೇಕ ಉನ್ನತ ಹುದ್ದೆಯಲ್ಲಿರುವವರೆಲ್ಲರೂ ಸರ್ಕಾರಿ ಶಾಲೆಯಲ್ಲೆ ಓದಿ ಉನ್ನತ ಸಾಧನೆ ಮಾಡಿದವರಾಗಿದ್ದಾರೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆ,ದುಂಡನಹಳ್ಳಿ,ಗೊಲ್ಲರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕದಲೂರು ಉದಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನೋಟ್ ಬುಕ್ಸ್, ಪಠ್ಯಪರಿಕರ ಮತ್ತು ಬ್ಯಾಗ್ ಗಳನ್ನು ವಿತರಿಸಿ ಅವರು ನಂತರ ಮಾತನಾಡಿದರು.
ಸರ್ಕಾರಿ ಶಾಲೆಗಳೆಂದು ಯಾರು ಅಸಡ್ಡೆ ಮಾಡಬಾರದು. ಏಕೆಂದರೆ ಇಂದು ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸರ್ಕಾರದ ಉನ್ನತ ಹುದ್ದೆಯಲ್ಲಿ ಕುಳಿತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆಯಿಂದ ಕಲಿತರೆ ಸರ್ಕಾರಿ ಶಾಲೆಗಳನ್ನು ಸೇರಿ ಉತ್ತಮ ಸಾಧನೆ ಮಾಡಬಹುದು ಎಂದರು.
ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ಶಾಲಾ ಮಕ್ಕಳಿದ್ದು,ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಬ್ಯಾಗ್ ಹಾಗೂ ಪಠ್ಯೇತರ ಪರಿಕರಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೀಡುತ್ತಿದ್ದೇವೆ.ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಶ್ರದ್ಧೆಯಿಂದ ಕಲಿತು,ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮೊರೆ ಹೋಗಿದ್ದು, ಅಂಗೈಯಲ್ಲೇ ಪ್ರಪಂಚವನ್ನು ನೋಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಮಕ್ಕಳು ಕಾಲ ಕಳೆಯಲು ಜಾಲತಾಣವನ್ನು ಬಳಸಿಕೊಂಡು ದಾರಿ ತಪ್ಪುತ್ತಿದ್ದು, ಮಕ್ಕಳ ಪೋಷಕರು ಈ ಬಗ್ಗೆ ಗಮನಹರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ನಿ ವಿನುತಾ ಉದಯ್, ಸಿಪಾಯಿ ಶ್ರೀನಿವಾಸ್,ಯತೀಶ್,ಧನಂಜಯ, ತಿಮ್ಮೇಗೌಡ, ಅಣ್ಣೂರು ಮನೋಹರ್, ಮನು,ಹರೀಶ್,ಮುಖ್ಯೋಪಾಧ್ಯಯರಾದ ರೇವಣ್ಣ,ಸಹ ಶಿಕ್ಷಕರಾದ ,ರಘು,ಸುಮಾ,ದೇವರಾಜು ಮತ್ತಿತರರು ಇದ್ದರು.