Tuesday, November 17, 2026

ಪ್ರಾಯೋಗಿಕ ಆವೃತ್ತಿ

ಯುವಜನರು ರಾಜಕೀಯ ಬದಲಾವಣೆಯ ಧ್ವನಿಯಾಗಲಿ : ಡಾ.ವಾಸು ಹೆಚ್.ವಿ

ಮಂಡ್ಯ : ರಾಜಕೀಯವು ಸರಿಯಿಲ್ಲ ಎಂದು ದೂರ ಸರಿಯುವ ಬದಲು ಯುವಜನರು ಹೊಸ ರಾಜಕೀಯವನ್ನು ಕಟ್ಟುವ ಧ್ವನಿಯಾಗಿ ಹೊರಹೊಮ್ಮಬೇಕು ಎಂದು ಜಾಗೃತ ಕರ್ನಾಟಕದ ಸಂಚಾಲಕ ಡಾ.ವಾಸು ಹೆಚ್.ವಿ ತಿಳಿಸಿದರು.

ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ “ರಾಜಕೀಯವು ಬದಲಾವಣೆಯ ದೊಡ್ಡ ಅಸ್ತ್ರ: ಒಳ್ಳೆಯ ಜನರು ರಾಜಕೀಯಕ್ಕೆ ಬಂದು ಬದಲಾವಣೆ ತರಬೇಕು” ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯವೆಂದರೆ ಕೇವಲ ಅಧಿಕಾರವಲ್ಲ, ಅದು ಸಮಾಜವನ್ನು ಬದಲಾಯಿಸುವ ಶಕ್ತಿಶಾಲಿ ಅಸ್ತ್ರ. ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ, ಸಂವಿಧಾನದ ಮೌಲ್ಯಗಳು ಮತ್ತು ಜನಪರ ಕಾಳಜಿಯುಳ್ಳ ಒಳ್ಳೆಯ ಯುವಜನರು ರಾಜಕೀಯ ಪ್ರವೇಶಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ಈ ಆಶಯವನ್ನು ವಿದ್ಯಾರ್ಥಿ ಯುವಜನರಲ್ಲಿ ಬಿತ್ತುವ ಉದ್ದೇಶದಿಂದ ಜಾಗೃತ ಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ದೇಶದಲ್ಲಿ ಈಗಾಗಲೇ ಯುವ ಜನರ ಧ್ವನಿಯು ಕಾಕ್ರೋಜ್ ಜನತಾ ಪಾರ್ಟಿಯ ಮೂಲಕ ಮೊಳಗಲು ಶುರುವಾಗಿದೆ, ಅಂತಹ ರಾಜಕೀಯ ಬದಲಾವಣೆ ಇನ್ನು ಕೆಲವೇ ವರ್ಷಗಳಲ್ಲಿ ಸಾಧ್ಯವಾಗಲಿದೆ ಎಂದು ಆಶಿಸಿದರು.

ಜಾಗೃತ ಕರ್ನಾಟಕದ ಸಂಚಾಲಕ ಸಂತೋಷ್ ಎಂ ಪ್ರಸ್ತಾವಿಕ ಭಾಷಣ ಮಾಡಿ, ಜಾಗೃತ ಕರ್ನಾಟಕ ರಾಜ್ಯದಾದ್ಯಂತ ಯುವಜನರನ್ನು ಸಂಘಟಿಸುವ ಉದ್ಧೇಶದಿಂದ ಇಂತಹ ಭಾಷಣ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಮುಖ್ಯವಾಗಿ ಯುವಜನರ ಮಾತುಗಳನ್ನು ಕೇಳಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದರು. ನಗರಕೆರೆ ಜಗದೀಶ್ ಹಾಗೂ ಅಪೂರ್ವ ಚೇತನ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ