Sunday, November 22, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ ಶಿಕ್ಷೆ; ಮೂವರಿಗೆ 3 ವರ್ಷ ಜೈಲು

ಶ್ರೀರಂಗಪಟ್ಟಣ ತಾಲ್ಲೂಕಿನ  ಚಿಕ್ಕಅಂಕನಹಳ್ಳಿಯಲ್ಲಿ ನಡೆದಿದ್ದ ಶ್ರೀಧರ್ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶ್ರೀರಂಗಪಟ್ಟಣದ 3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಚಿಕ್ಕಂಕನಹಳ್ಳಿ ಗ್ರಾಮದ ಅಪರಾಧಿಗಳಾದ ಸೋಮಶೇಖರ್ ಮತ್ತು ಶಿವರಾಜುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಜವರಯ್ಯ, ಅವಿನಾಶ್, ಪ್ರಮೋದ್ ಗೆ ಮೂರು ವರ್ಷ ಶಿಕ್ಷೆ ಘೋಷಿಸಿದೆ.

ಘಟನೆ ವಿವರ

ಶ್ರೀರಂಗಪಟ್ಟಣ ತಾಲೂಕು ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ 2014ನೇ ಜನವರಿ 12 ರಂದು ರಾತ್ರಿ 8 ರ ಸಮಯದಲ್ಲಿ ಅಂಬೇಡ್ಕರ್ ಭವನದ ಬಳಿ ಚಾಮಯ್ಯ ಎಂಬಾತ ಮೂತ್ರ ವಿರ್ಸಜನೆ ಮಾಡಿದ್ದ ವಿಚಾರಕ್ಕೆ ಪ್ರಕಾಶ್  ಅಕ್ಷೇಪ ಮಾಡಿದ್ದರು, ಇದೇ ವಿಚಾರದಲ್ಲಿ ಕೋಪಗೊಂಡ  ಜವರಯ್ಯ, ಸೋಮಶೇಖರ, ಶಿವರಾಜು, ಅವಿನಾಶ, ಪ್ರಮೋದ, ರಾಜು, ಮರಿನಂಜ, ನಟರಾಜು, ರಾಮ, ಲಕ್ಷ್ಮಣ, ಜವರಯ್ಯ, ಮಹೇಶ್, ನಾಗರಾಜ ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದ ವೇಳೆ ಅರಕೆರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಿದ್ದೇಗೌಡ ಹಾಗೂ ಉಮೇಶ್  ಸ್ಥಳಕ್ಕೆ ಹೋಗಿ ಗಲಾಟೆ ಬಿಡಿಸಿದರೂ ಸಹ  ಪೊಲೀಸರಿಗೆ ಹಲ್ಲೆ ಮಾಡಿದ್ದಲ್ಲದೆ  ಶ್ರೀಧರ್ ಅಲಿಯಾಸ್ ಕೆಂಚಪ್ಪ ನನ್ನ ಕೊಲೆ ಮಾಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಅಂದಿನ  ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕ ಸಿ.ಟಿ. ಜಯಕುಮಾರ್ ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ  ಸಲ್ಲಿಸಿದ್ದರು. ವಿಚಾರಣೆಯು 3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೋಮಶೇಖರ, ಶಿವರಾಜು ಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದು ಇದೇ ಪ್ರಕರಣದಲ್ಲಿ  ಜವರಯ್ಯ,ಅವಿನಾಶ, ಪ್ರಮೋದ್ ಗೆ 3 ವರ್ಷ ಕಾರಗೃಹ ಶಿಕ್ಷೆಯನ್ನು ನ್ಯಾಯಾಲಯವು ಪ್ರಕಟಿಸಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾದ ಸೋಮಶೇಖರ್ ಮತ್ತು ಶಿವರಾಜು ಅವರನ್ನು ಬಂಧನಕ್ಕೆ ಒಳಪಡಿಸಿದ್ದರೆ,  ಮೂರು ವರ್ಷ ಶಿಕ್ಷೆಗೆ ಒಳಗಾದದವರಿಗೆ ಜಾಮೀನು ನೀಡಲಾಗಿದೆ.

ಸರ್ಕಾರಿ ಅಭಿಯೋಜಕಿ ಪ್ರಫುಲ್ಲಾ ಅವರು ವಾದ ಮಂಡಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿದ ಶ್ರೀರಂಗಪಟ್ಟಣ ವೃತ್ತ ಮತ್ತು ಅರಕೆರೆ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ