Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಲಿಫ್ಟ್ ಅಳವಡಿಕೆ ಕಾಮಗಾರಿಗೆ ಶಾಸಕ ರವಿಕುಮಾರ್ ಶಂಕುಸ್ಥಾಪನೆ

ಸದಾ ಒತ್ತಡದಲ್ಲಿರುವ ಪತ್ರಕರ್ತರು ಒತ್ತಡ ರಹಿತ ಮೆದುಳಿನಿಂದ ಕೆಲಸ ಮಾಡಿದರೆ ಅವರ ಬೆರಳುಗಳಲ್ಲಿ ಅಕ್ಷರಗಳ ಸರಸ್ವತಿ ನಲಿದಾಡುತ್ತಾಳೆ ಎಂದು ಶಾಸಕ ಪಿ.ರವಿಕುಮಾರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ಲಿಫ್ಟ್ ಅಳವಡಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಯಾವ ಪತ್ರಕರ್ತರ ಸಂಘದಲ್ಲೂ ಲಿಫ್ಟ್ ವ್ಯವಸ್ಥೆಯಿಲ್ಲ. ರಾಜಧಾನಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲೂ ಲಿಫ್ಟ್ ಇಲ್ಲ.ರಾಜ್ಯದಲ್ಲೆ ಲಿಫ್ಟ್ ಹೊಂದಿದ ಪ್ರಥಮ ಪತ್ರಕರ್ತರ ಸಂಘದ ಎಂಬ ಹೆಗ್ಗಳಿಕೆಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಲಿಫ್ಟ್ ಕಾಮಗಾರಿಗೆ 14 ಲಕ್ಷ ತಗುಲಲಿದ್ದು, 5 ಲಕ್ಷ ರೂ ಬಿಡುಗಡೆ ಮಾಡಿದ್ದೇನೆ. ಉಳಿದ 9 ಲಕ್ಷ ರೂಗಳನ್ನು ಪ್ರೀತಿಯಿಂದ ಒದಗಿಸಲಾಗುವುದು. ರಾಜಕಾರಣಿಗಳಿಂದ ತಮಗೆ ಬೇಕಾದದ್ದನ್ನು ಪಡೆಯಲು ಅದಕ್ಕೆ ಪೂರಕವಾದ ಪ್ರಶ್ನೆ ಕೇಳುವ ಮೂಲಕ ಸಲವತ್ತನ್ನು ಪಡೆಯಲುವ ಚಾತರ‍್ಯತೆ ಮಂಡ್ಯ ಪತ್ರಕರ್ತರ ಸಂಘಕ್ಕಿದೆ. ಅವರ ಬೇಡಿಕೆಗೆ ಇಲ್ಲ ಎಂದು ಹೇಳಲು ನನಗೆ ಸಾಧ್ಯವಿಲ್ಲವೆಂದರು.

ಪತ್ರಕರ್ತರು ಮಂಡ್ಯ ನಗರದ ಸುತ್ತಮುತ್ತಲಲ್ಲಿ 1 ಎಕರೆ ಸ್ಥಳ ಗುರುತಿಸಿಕೊಟ್ಟರೆ ಪತ್ರಕರ್ತರಿಗೆ ನಿವೇಶನ ಒದಗಿಸಲು ಮಂಜೂರು ಮಾಡಿಸಲಾಗುವುದು. ಪತ್ರಕರ್ತರ ಸಂಘಕ್ಕೂ ನೂತನ ಕಟ್ಟಡ ನಿರ್ಮಿಸಲು ನಗರಕ್ಕೆ ಹತ್ತಿರದಲ್ಲಿ ನಿವೇಶನ ಗುರುತಿಸಿದರೆ ಪತ್ರಕರ್ತರು ಒತ್ತಡರಹಿತವಾಗಿ ಕಾಲ ಕಳೆಯುವ ಸ್ಥಳವಾಗಿ ಮಾಪಾರ್ಡು ಮಾಡಬಹುದಾಗಿದೆ ಎಂದು ಹೇಳಿದರು.

ಪತ್ರಕರ್ತರ ಬೇಡಿಕೆಯಂತೆ ಮೊದಲು ಜವಾಬ್ದಾರಿ ಹೊತ್ತು ಪತ್ರಕರ್ತರ ಭವನದ ರಸ್ತೆಯ ಅಭಿವೃದ್ಧಿಯನ್ನು ಮಾಡಲಾಗುವುದು. 25 ಕೋಟಿ ರೂ ವೆಚ್ಚದಲ್ಲಿ ಮಂಡ್ಯ ನಗರದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ 25 ಕೊಟಿ ಅನುದಾನ ಸೇರಿ 50 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಮಂಡ್ಯ ಕ್ಷೇತ್ರವನ್ನು ಕಂಡು ಕೇಳರಿಯದಂತೆ ಅಭಿವೃದ್ದಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಕಾರಣಿಗಳ ಮೇಲಿನ ಸುದ್ದಿ ಆರೋಗ್ಯಕರವಾಗಿರಲಿ. ಯಾವುದೇ ಸುದ್ದಿಗಳನ್ನು ಮಾಡುವ ಮೊದಲು ಅವುಗಳ ಹಿನ್ನಲೆ ಅರಿತು ಸುದ್ದಿಗೆ ಆದ್ಯತೆ ನೀಡಿ. ಜನರು ಈಗಲೂ ಪತ್ರಿಕೆಗಳಿಗೆ ಆದ್ಯತೆ ನೀಡುತ್ತಾರೆ. ಪತ್ರಿಕೋದ್ಯಮ ಹಾಗೂ ಸಾಮಾಜಿಕ ಜಾಲತಾಣ ಇಂದು ದೇಶದ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿ ಹೊಂದಿದೆ. ಅದಕ್ಕೆ ಶ್ರೀಲಂಕಾ, ಬಾಂಗ್ಲದೇಶ ಮತ್ತು ನೇಪಾಳ ದೇಶಗಳೇ ಸಾಕ್ಷಿ. ಸುದ್ದಿ ನೀಡುವ ವೇಗದಲ್ಲಿ ಸತ್ಯವನ್ನು ಮರೆ ಮಾಚುವ ಕೆಲಸ ಆಗಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಮಾತನಾಡಿ, ಪತ್ರಕರ್ತರ ಒಳಿತಿಗೆ ಹಲವು ಸವಲತ್ತುಗಳನ್ನು ಒದಗಿಸುವಲ್ಲಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಿದೆ. ಕ್ಷೇತ್ರದ ಶಾಸಕರು ಸ್ವತಃ ಪತ್ರಕರ್ತರಾಗಿದ್ದವರು, ಪತ್ರಕರ್ತರ ಸಂಘದ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಶಾಸಕರು ಭರವಸೆ ನೀಡಿದಂತೆಯೇ ಲಿಫ್ಟ್ ಗೆ ಅನುದಾನ ನೀಡಿದ್ದಾರೆ. ಹಾಗೆಯೇ ಪತ್ರಕರ್ತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಅವರಿಗೆ ಸ್ವಂತ ಸೂರೊದಗಿಸುವ ನಿಟ್ಟಿನಲ್ಲಿ ನಿವೇಶನ ಕೊಡಿಸುವಂತೆ ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಮಾತನಾಡಿ, ರವಿಕುಮಾರ್ ಅವರು ಶಾಸಕರಾಗುವ ಮೊದಲು ಪತ್ರಕರ್ತರಾಗಿದ್ದವರು, ಅವರನ್ನು ನಮ್ಮ ವೃತ್ತಿಬಾಂಧವರು ಎಂದು ಕರೆಯಲು ಹೆಮ್ಮೆಯಿದೆ. ಹಲವು ಪ್ರಥಮಗಳಲ್ಲಿ ಮಂಡ್ಯ ಜಿಲ್ಲೆ ಮೊದಲಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರ ಶಾಸಕರು ಸ್ಪಂಧಿಸಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದರು.

ಕಳೆದ ಪತ್ರಕರ್ತರ ಕಾರ್ಯಕ್ರಮದಲ್ಲಿ ಲಿಫ್ಟ್ ಬೇಡಿಕೆ ಸಲ್ಲಿಸಿದ್ದು, ಯಾವುದೇ ಯೋಚನೆ ಮಾಡದೇ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಅದರಂತೆ ಶೀಘ್ರವಾಗಿ ಲಿಫ್ಟ್ ಕಾಮಗಾರಿ ಮಾಡಿಸಲು ನಿರ್ಮೀತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಸಂಘದ ಮಾಜಿ ಅಧ್ಯಕ್ಷರಾದ ಚೈತನ್ಯಕುಮಾರ್, ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ನವೀನ್ ಚಿಕ್ಕಮಂಡ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ನಿರ್ಮೀತಿ ಕೇಂದ್ರ ಯೋಜನಾ ನಿರ್ದೇಶಕ ಜಯಪ್ರಕಾಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ