Friday, October 18, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ವೀರಶೈವ- ಲಿಂಗಾಯಿತ ಮಹಾಸಭಾ ಚುನಾವಣೆ: ಬೆಂಬಲಿಸಲು ಮನವಿ

ವೀರಶೈವ ಮತ್ತು ಲಿಂಗಾಯಿತ ಸಮುದಾಯದ ಅಭಿವೃದ್ದಿಗೆ ಶ್ರಮಿಸುವುದರ ಜೊತೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಿಂಗಳೊಳಗೆ ಜಿಲ್ಲಾ ಕೇಂದ್ರದಲ್ಲಿ ಬಸವಭವನ ನಿರ್ಮಾಣಕ್ಕೆ ಮುಂದಾಗುವ ಆಕಾಂಕ್ಷೆಯನ್ನು ಹೊಂದಿರುವ ನನಗೆ ಮತ್ತು ನಮ್ಮ ತಂಡಕ್ಕೆ ಅರ್ಶೀವದಿಸಬೇಕೆಂದು ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಿ.ಶಂಕರ್ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲಭಾರತ ವೀರಶೈವ ಮಹಾಸಭಾ ಮಂಡ್ಯ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಚುನಾವಣೆ ಜೂನ್ 21ರಂದು ನಡೆಯಲಿದ್ದು, ಏಳು ತಾಲ್ಲೂಕಿನಲ್ಲಿಯೂ ನನಗೆ ಅಭೂತಪೂರ್ವ ಬೆಂಬಲ ನೀಡಿದರೇ ಮಂಡ್ಯದಲ್ಲಿ ನಿವೇಶನವನ್ನು ಗುರುತಿಸಿ ನನ್ನ ಸ್ವಂತ ಹಣದಿಂದಲೇ ಬಸವ ಭವನ ನಿರ್ಮಾಣಕ್ಕೆ ಚಾಲನೆ ಕೊಡುತ್ತೇನೆ, ನಂತರ ಎಲ್ಲಾರ ಸಹಕಾರ ಮತ್ತು ಸಹಾಯದೊಂದಿಗೆ ಭವನವನ್ನು ಅಂತಿಮಗೊಳಿಸುತ್ತೇನೆ, ಜೊತೆಗೆ ಎಲ್ಲಾ ತಾಲ್ಲೂಕು ಘಟಕಗಳಲ್ಲಿಯೂ ಬಸವಭವನ ನಿರ್ಮಾಣಕ್ಕೆ ಮುಂದಾಗುತ್ತೇನೆಂದು ಭರವಸೆ ನೀಡಿದರು.

ಅಖಿಲಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕುಂದೂರು ಮೂರ್ತಿ ಮಾತನಾಡಿ, ಅಖಿಲಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಡಿ.ಶಂಕರ್‌ರವರು ಸಮಾಜಮುಖಿ ಸೇವೆ, ಸರಳತೆ ಜೊತೆಗೆ ಸಮುದಾಯವನ್ನು ಒಗ್ಗಟ್ಟಿನಿಂದ ತೆಗೆದುಹೋಗುವ ಶಕ್ತಿ ಹೊಂದಿದ್ದು, ಇವರಿಗೆ ಮಳವಳ್ಳಿ ತಾಲ್ಲೂಕು ಮಹಾ ಸಭಾದ ವತಿಯಿಂದ ಸಂಪೂರ್ಣವಾಗಿ ಬೆಂಬಲ ನೀಡಲಾಗುದೆಂದು ಭರವಸೆ ನೀಡಿದರು.

ವೀರಶೈವ ಮುಖಂಡ ಬಭ್ರುವಾಹನ ಮಾತನಾಡಿ, ಪ್ರತಿ ತಾಲ್ಲೂಕಿನಲ್ಲಿ ಬಸವಭವನ ನಿರ್ಮಾಣವಾಗಬೇಕು. ವಚನ ಸಾಹಿತ್ಯ ಪ್ರತಿಯೊಬ್ಬರಿಗೂ ಮುಟ್ಟಿಸುವುದರ ಜೊತೆಗೆ ಯುವ ಸಮೂಹಕ್ಕೆ ವಚನ ಸಾಹಿತ್ಯವನ್ನು ಪರಿಚಯಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಯಕಯೋಗಿ ಸಮೂಹ ಸಂಸ್ಥೆ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಳಾದ ಮಾ.ಕು ಶಿವಕುಮಾರ್, ಚಂದ್ರಶೇಖರ್, ಮಹದೇವು, ಶ್ರೀಕಂಠಸ್ವಾಮಿ, ಶಿವಪ್ರಸಾದ್, ಬಿ.ಸಿ ಮಹದೇವ,ಗುರುಮಲ್ಲೇಶ್, ಜಗದೀಶ್, ನವೀನ್‌ಕುಮಾರ್, ಮಹೇಶ್,ವಿಶ್ವನಾಥ್, ಮುಖಂಡರಾದ ದಯಾಶಂಕರ್, ಸುಂದ್ರಪ್ಪ,ಶಿವಸ್ವಾಮಿ, ಗುರುಸ್ವಾಮಿ, ಚನ್ನಪ್ಪ,ಮಹೇಶ್, ಸುರೇಶ್, ಶಂಭು, ಗಜೇಂದ್ರ  ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!