Friday, November 20, 2026

ಪ್ರಾಯೋಗಿಕ ಆವೃತ್ತಿ

ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸಂಘಟನೆ ರಚನೆ

ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ(ರಿ)ಜಿಲ್ಲಾ ಘಟಕವನ್ನು ರಚಿಸಿದ್ದು, ಸಮಾಜದ ವಿದ್ಯಾರ್ಥಿಗಳನ್ನು ಸಂಘಟಿಸಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಬಿ.ಟಿ. ಜೀವನ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಸಂಘಟಿಸಿ ದೇಶದ ಅಭಿವೃದ್ಧಿ ಮತ್ತು ಒಳ್ಳೆಯ ಪ್ರಜೆ ಆಗುವ ನಿಟ್ಟಿನಲ್ಲಿ ಆತನಿಗೆ ಪ್ರೋತ್ಸಾಹಿಸುವುದು ಈ ಸಂಘಟನೆಯ ಉದ್ದೇಶ ಎಂದರು.

ಸಮುದಾಯದ ಬಡ ವಿದ್ಯಾರ್ಥಿಗಳ ಕುಂದುಕೊರತೆ ನೀಗಿಸಲು ನಮ್ಮ ಸಂಘಟನೆ ಬದ್ಧವಾಗಿದ್ದು, ಯುವ ವಿದ್ಯಾರ್ಥಿಗಳನ್ನು ಸಮಾಜ ಸೇವೆ,ದೇಶಾಭಿಮಾನ ಬೆಳೆಸಿಕೊಳ್ಳಲು ದಾರಿದೀಪವಾಗಿ ಸಂಘಟನೆ ಕೆಲಸ ಮಾಡುತ್ತದೆ. ಯುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಸುಸಂಸ್ಕೃತ ಪ್ರಜೆಯನ್ನಾಗಿ ಮಾಡುವುದೇ ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದರು.

ಮಂಡ್ಯ ಜಿಲ್ಲೆಯ ಅಧ್ಯಕ್ಷರಾಗಿ ಚೇತನ್,ಉಪಾಧ್ಯಕ್ಷರಾಗಿ ತೇಜಸ್,ಯಶ್ವಂತ್,ಪ್ರಧಾನ ಕಾರ್ಯದರ್ಶಿ ನಂದೀಶ್,ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಪ್ರಜ್ವಲ್,ಖಜಾಂಚಿ ಸುಹಾಸ್ ಸೇರಿದಂತೆ ಮೂವರು ಸಂಘಟನಾ ಕಾರ್ಯದರ್ಶಿ, ಎಂಟು ಮಂದಿ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್, ಚೇತನ್,ತೇಜಸ್,ಯಶ್ವಂತ್, ನಂದೀಶ್ ಮತ್ತಿತರರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ