Saturday, November 21, 2026

ಪ್ರಾಯೋಗಿಕ ಆವೃತ್ತಿ

”ಸಾಹಿತ್ಯ ಓದುವುದೆಂದರೆ ಜಗತ್ತಿನ ಜ್ಞಾನ ಶಾಖೆಗಳನ್ನು ತಿಳಿದುಕೊಂಡಂತೆ” : ಮೀರಾಶಿವಲಿಂಗಯ್ಯ

ಸಾಹಿತ್ಯವನ್ನು ಓದುವುದೆಂದರೆ ಜಗತ್ತಿಗೆ ಅನೇಕ ಜ್ಞಾನ ಶಾಖೆಗಳನ್ನು ತಿಳಿದುಕೊಂಡಂತೆ, ಕನ್ನಡ ಸಾಹಿತ್ಯವು ಒಂದು ವಿಶೇಷವಾದ ಅನುಭೂತಿಯಾಗಿದೆ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಮೀರಾಶಿವಲಿಂಗಯ್ಯ ಅಭಿಪ್ರಾಯಪಟ್ಟರು.

ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ  ಮಳವಳ್ಳಿ ತಾಲ್ಲೂಕು 7ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಕೇವಲ ಲೌಕಿಕ ವಿಚಾರಗಳನ್ನಷ್ಟೆ ತಿಳಿಸಿಕೊಡುವುದಿಲ್ಲ, ಪಾರಮಾರ್ಥಿಕ ವಿಚಾರಗಳನ್ನು ತಿಳಿಸುತ್ತದೆ. ಇಂತಹ ವಿಷಯಗಳನ್ನು ನಾವು ಬಸವಣ್ಣ ಹಾಗೂ ಅಲ್ಲಮ ಪ್ರಭು ಅವರ ವಚನಗಳನ್ನು ಕಾಣಬಹುದು. ಜೀವನದ ಅರ್ಥವನ್ನು ಸಾಹಿತ್ಯ ತಿಳಿಸುತ್ತದೆ. ಸಮ್ಮೇಳನಗಳು ಕನ್ನಡ ಸಾಹಿತ್ಯಕ್ಕೆ ಸಾಣಿ ಹಿಡಿದಂತೆ ಮಾಡುತ್ತವೆ ಎಂದು ನುಡಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವ ಮಟ್ಟದ ಸಾಹಿತಿಗಳನ್ನು ನಾವು ಗುರುತಿಸಬಹುದಾಗಿದೆ. ಕುವೆಂಪು, ಕೆಎಸ್ ನ, ಬಿಎಂಶ್ರೀ ಇವರಲ್ಲರ ಕೊಡುಗೆ ಅಪಾರವಾಗಿದೆ. ಕವಿ ಷಡಕ್ಷರ ದೇವ ಅವರು ಮಳವಳ್ಳಿ ತಾಲ್ಲೂಕಿನ ಧನಗೂರುನವರು ಎಂಬುದು ಮಂಡ್ಯ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿ ಹೆಸರುವಾಸಿಯಾಗಿದ್ದರು ಎಂದು ಸ್ಮರಿಸಿದರು.

ಕನ್ನಡ ಸಾಹಿತ್ಯ ಇಷ್ಟೆಲ್ಲ ಪ್ರಬಲರಾಗಿದ್ದರೂ, ಈ ಹಿಂದಿನಿಂದಲೂ ಕನ್ನಡಿಗರಿಗೂ ಇಂಗ್ಲೀಷ್ ಮೋಹ ಇದ್ದೇ ಇದೆ. ಅನೇಕ ಕನ್ನಡ ಸಾಹಿತಿಗಳು ಆಂಗ್ಲ ಪದಗಳನ್ನು ಬಳಕೆ ಮಾಡಿದ್ದಾರೆ. ಕವಿ ಸಿದ್ದಲಿಂಗಯ್ಯ, ರಂಗಕರ್ಮಿ ಬಿ.ವಿ.ಕಾರಂತ ಅವರು ಇಂಗ್ಲೀಷ್ ಬಳಕೆ ಮಾಡಿದ್ದಾರೆ. ಸಾಹಿತ್ಯದಲ್ಲೆ ಇಂಗೀಷ್ ಬಳಕೆ ಸರ್ವೆ ಸಾಮಾನ್ಯವಾಗಿದೆ. ಭಾಷೆ ಯಾವುದೇ ಆಗಲಿ, ವಿಶಿಷ್ಟ ಅನುಭವವನ್ನು ಓದುಗ ಪಡೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ನುಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ