Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ : ಲೋಕಾಯುಕ್ತ ಬಲೆಗೆ ಬಿದ್ದ ಮುಖ್ಯ ಪೊಲೀಸ್ ಪೇದೆ

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ವೆಂಕಟೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಂಚೆ ದೊಡ್ಡಿ ಗ್ರಾಮದ ಊರಿನ ನ್ಯಾಯ ಸಂಬಂಧ ವ್ಯಾಜ್ಯದ ಬಗ್ಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ನವೀನ್ ಎಂಬಾತನಿಗೆ ಧಮ್ಕಿ ಹಾಕುತ್ತಿದ್ದನು.ಇದರಿಂದ ನವೀನ್ ಎಂಬತನು ಲೋಕಾಯುಕ್ತಕ್ಕೆ ದೂರು ನೀಡಿದನು.

ಈ ದೂರಿನ ಮೇರೆಗೆ ನಿನ್ನೆ ಸಂಜೆ ಡಿ ವೈ ಎಸ್ ಪಿ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಬ್ಯಾಟರಾಯ ಗೌಡ ಮತ್ತು ಕುಮಾರ್ ನೇತೃತ್ವದಲ್ಲಿ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆ ಎದುರಿನಲ್ಲಿ ಇರುವ ಜ್ಯೂಸ್ ಬರ್ಗ್ ಅಂಗಡಿಯಲ್ಲಿ ಐದು ಸಾವಿರ ರೂ.ಗಳ ಲಂಚ ತೆಗೆದುಕೊಳ್ಳುವಾಗ ದಾಳಿ ನಡೆಸಿ ವಶಕ್ಕೆ ಪಡೆದರು.

ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ