Friday, October 18, 2024

ಪ್ರಾಯೋಗಿಕ ಆವೃತ್ತಿ

ಮತ್ತೊಂದು ರೈಲ್ವೇ ಅಪಘಾತ| ಹಳಿತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌

ಗುರುವಾರ ಬೆಳಗ್ಗೆ ಅಗರ್ತಲಾದಿಂದ ಹೊರಟು ಮುಂಬೈಗೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ಮಧ್ಯಾಹ್ನ 3:55 ರ ಸುಮಾರಿಗೆ ಅಸ್ಸಾಂನ ದಿಬಾಲಾಂಗ್ ನಿಲ್ದಾಣದಲ್ಲಿ ಹಳಿತಪ್ಪಿದೆ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ. ರೈಲಿನ 8 ಬೋಗಿಗಳು ಹಳಿತಪ್ಪಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಸ್ಸಾಂ

“ಪವರ್ ಕಾರ್ ಮತ್ತು ರೈಲಿನ ಇಂಜಿನ್ ಸೇರಿದಂತೆ ಎಂಟು ಬೋಗಿಗಳು ಹಳಿತಪ್ಪಿದವು. ಆದರೆ, ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಗಾಯಗಳ ಬಗ್ಗೆ ವರದಿಯಾಗಿಲ್ಲ” ಎಂದು ಈಶಾನ್ಯ ಗಡಿ ರೈಲ್ವೆ ವಲಯದ ಸಿಪಿಆರ್ಒ ತಿಳಿಸಿದ್ದಾರೆ. ಲುಮ್ಡಿಂಗ್ ವಿಭಾಗದ ಅಡಿಯಲ್ಲಿ ಲುಮ್ಡಿಂಗ್-ಬರ್ದರ್‌ಪುರ್ ಹಿಲ್ ವಿಭಾಗದಲ್ಲಿ ಅಪಘಾತ ಸಂಭವಿಸಿದೆ.

ಅಪಘಾತ ಪರಿಹಾರ, ವೈದ್ಯಕೀಯ ಸೇವೆ, ರಕ್ಷಣೆ ಮತ್ತು ರೈಲು ಮರುಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆಗಾಗಿ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಲುಮ್ಡಿಂಗ್‌ನಿಂದ ಸ್ಥಳಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಲುಮ್ಡಿಂಗ್-ಬದರ್‌ಪುರ್ ಸಿಂಗಲ್ ಲೈನ್ ವಿಭಾಗದಲ್ಲಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಲುಮ್‌ಡಿಂಗ್‌ನಲ್ಲಿರುವ ಸಹಾಯವಾಣಿ ಸಂಖ್ಯೆಗಳು 03674 263120, 03674 263126” ಎಂದು ಸಿಪಿಆರ್‌ಒ ಹೇಳಿದ್ದಾರೆ. ಅಸ್ಸಾಂ

ಇತ್ತಿಚೆಗಷ್ಟೆ, ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು – ದರ್ಭಾಂಗ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 19 ಪ್ರಯಾಣಿಕರು ಗಾಯಗೊಂಡಿದ್ದರು. ಈ ವೇಳೆ ಪ್ಯಾಸೆಂಜರ್ ರೈಲಿನ 12 ರಿಂದ 13 ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ. ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು, ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ತಪ್ಪಾಗಿ ಪ್ರವೇಶಿಸಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!