Sunday, November 22, 2026

ಪ್ರಾಯೋಗಿಕ ಆವೃತ್ತಿ

ಸಂಸ್ಕೃತಿ ಬಿಂಬಿಸುವ ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ-ಮಾಯಪ್ಪ

ಶ್ರೀಕೃಷ್ಣ ವೇಷ ಸ್ಪರ್ಧೆಯು ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸುವ ಜೊತೆಗೆ, ಚಿಂತನೆಯ ಗುಣವನ್ನು ಬೆಳೆಸಲಿದೆ ಎಂದು ಭಾರತ ವಿಕಾಸ ಪರಿಷತ್ ಮೈಸೂರು ಪ್ರಾಂತ ಉಪಾಧ್ಯಕ್ಷ ಎಂ.ಮಾಯಪ್ಪ ಅಭಿಪ್ರಾಯಪಟ್ಟರು.

ಮದ್ದೂರು ತಾಲ್ಲೂಕಿನ ಭಾರತೀನಗರದ ವೀರಶೈವ ಸಮುದಾಯ ಭವನದಲ್ಲಿ ನಡೆದ ಭಾರತ ವಿಕಾಸ ಪರಿಷತ್ ಬೌದ್ದಯಾನ ಶಾಖೆ ಮತ್ತು ವೀರಶೈವ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನಗಳಲ್ಲಿ ದೇವರ ಮೇಲಿನ ಭಕ್ತಿ ಕಡಿಮೆಯಾಗುತ್ತಿದೆ. ಆರಾಧನೆ, ಪೂಜೆ ಪುನಸ್ಕಾರಗಳ ಬಗ್ಗೆ ಅಸಡ್ಡೆಯುಂಟಾಗಿದೆ. ಇದಕ್ಕೆ ವೈಜ್ಞಾನಿಕ ಬೆಳವಣಿಗೆ ಕಾರಣವಾಗಿರಬಹುದು. ನಾವು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ದೈವಿಕ ಆರಾಧನೆ ಅಗತ್ಯ ಎಂದರು.

ಭಾರತ ವಿಕಾಸ ಪರಿಷತ್ ಅಧ್ಯಕ್ಷ ಶಿವಮಾದೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿ, ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಭಾಗವಹಿಸುವುದು ಅತಿ ಮುಖ್ಯವಾಗಿದೆ. ಮಕ್ಕಳು ಶ್ರೀಕೃಷ್ಣವೇಷ ಸ್ಪರ್ಧೆಯನ್ನು ನೋಡುವುದಕ್ಕೆ ಕಣ್ಣೇರಡು ಸಾಲದೆಂದು ಪ್ರಶಂಸಿದರು.

ವಿಜೇತರಪಟ್ಟಿ:- ಎಂ.ಪಿ.ದಿತ್ಯ, ಕೃತಿಕ, ಪ್ರಮೋದ್ ಕುಮಾರ್ ಕೆ.ಎಂ.ದೊಡ್ಡಿ (ಪ್ರಥಮ), ಎ.ವೃದ್ದಿ, ಅಭಿಜಿತ್ ಕೆ.ಎಂ.ದೊಡ್ಡಿ (ದ್ವಿತೀಯ), ಎಂ.ಕೀರ್ತನ ಮಲ್ಲಿಕಾರ್ಜುನ ಸ್ವಾಮಿ  ಕೆ.ಎಂ.ದೊಡ್ಡಿ(ತೃತೀಯ), ಆರ್.ತ್ರೀಶಾಲ್ರ ಹರಳಹಳ್ಳಿ(ನಾಲ್ಕನೇ), ಅಮೃತ ಕೃಷ್ಣ ಪ್ರತಾಪ್ ಅಣ್ಣೂರು(ಐದನೆ ಬಹುಮಾನ) ಪಡೆದುಕೊಂಡರು.

ಭಾಗವಹಿಸಿದ್ದ 70 ಕ್ಕೂ ಹೆಚ್ಚು ಮಕ್ಕಳಿಗೂ ಸಮಧಾನಕರ ಬಹುಮಾನ ನೀಡಲಾಯಿತು. ತೀರ್ಪಗಾರರಾಗಿ ಶಿಕ್ಷಕರಾದ ಎಚ್.ಎಂ.ಶಿವಲಿಂಗಪ್ಪಮ ಮಾದೇಶ್, ಗಾಯಿತ್ರಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎನ್.ಸುಧಾ, ವೀರಶೈವ ಮುಖಂಡ ರಾಜು, ದಾಸೇಗೌಡ, ಶಿಕ್ಷಕರಾದ ಸುಶೀಲ, ಪುಟ್ಟರಾಮರಾಜೆ ಅರಸು, ನಂಜುಂಡೇಗೌಡ, ಅಣ್ಣೂರು ಸತೀಶ್, ವೈ.ಬಿ.ಶ್ರೀಕಂಠಸ್ವಾಮಿ, ಗುಡಿಗೆರೆ ವೆಂಕಟೇಶ್, ಡಿ.ಎಸ್.ಗಿರೀಶ್, ಬೋರಯ್ಯ, ಎಚ್.ಜಿ.ನಾಗರಾಜು, ಚಿಕ್ಕಸಿದ್ದೇಗೌಡ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ