Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದ ಜನತೆ ಮತೀಯವಾದಕ್ಕೆ ಬಲಿಯಾಗುವುದು ಬೇಡ: ಎಂ.ಜಿ. ಹೆಗಡೆ

ಮಂಡ್ಯದ ಜನ ಸಕ್ಕರೆ ಹಂಚುವವರು ಸಕ್ಕರೆಯನ್ನೇ ಹಂಚಬೇಕೆ ಹೊರತು ದ್ವೇಷವನ್ನಲ್ಲ ಎಂದು ಮಂಗಳೂರಿನ ಎಂ.ಜಿ ಹೆಗಡೆ ಅಭಿಪ್ರಾಯಪಟ್ಟರು.

ಜಾಗೃತ ಕರ್ನಾಟಕ ಸಂಘಟನೆ ಮಂಡ್ಯದ ರೈತ ಸಂಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಕ್ರಾಂತಿ ಕಹಳೆ 50′ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಮತೀಯವಾದದ ಅಮಲು ಹೆಚ್ಚಾದಾಗ ನನ್ನ ಗುರುಗಳು ನನಗೆ ಹುಳಿ ಮಜ್ಜಿಗೆ ಕುಡಿಸಿ ಬುದ್ದಿವಾದ ಹೇಳಿ ಹೊರತಂದರು’ ಹಾಗಾಗಿ ಮನುಷ್ಯನಾಗಿದ್ದೇನೆ. ನನ್ನ ರೀತಿ ಯಾರೂ ಸಹ ಮತೀಯವಾದಕ್ಕೆ ಬಲಿಯಾಗುವುದು ಬೇಡ ಎಂದರು.

ಮಂಡ್ಯದಲ್ಲಿ ತಿಂಗಳ ಹಿಂದೆ ಉದ್ವಿಗ್ನತೆ ಆರಂಭವಾದಾಗ ಸಕ್ಕರೆಯ ನಾಡಿನ ಬಂಧುಗಳಿಗೊಂದು ಪತ್ರ ಅಂತ ಬರೆದಿದ್ದೆ. ಏಕೆಂದರೆ ನಾವು ಕರಾವಳಿಯಲ್ಲಿ ಮಾಡಿದ ಗಲಭೆಗಳು ನೆನಪಿಗೆ ಬಂದವು. ಸಂತರ ನಾಡಿನ ಈ ದೇಶದಲ್ಲಿ ಧರ್ಮದ ಅರ್ಥ ಗೊತ್ತಿಲ್ಲದವರು ಹಬ್ಬಿಸುತ್ತಿರುವ ಗಲಭೆ ತಡೆಯಲು ಮನಸ್ಸು ತುಡಿಯುತ್ತಿತ್ತು ಎಂದರು.

ಕರಾವಳಿಯಲ್ಲಿ 2008 ರಿಂದ ನಡೆದ ಕೋಮುಗಲಭೆಗಳಲ್ಲಿ ಕೇಸು ಹಾಕಿಸಿಕೊಂಡವರ 460 ಜನರ ಪಟ್ಟಿ ಗಮನಿಸಿದೆ. ಅದರಲ್ಲಿ 435 ಜನ ಹಿಂದುಳಿದ ವರ್ಗದವರಿದ್ದರೆ 15 ಜನ ದಲಿತರ ಮಕ್ಕಳು ಇದ್ದಾರೆ. ಅದು ಬಿಟ್ಟರೆ ಮೇಲ್ಜಾತಿಯ ಒಬ್ಬರೂ ಇಲ್ಲದಿರುವುದೇಕೆ ಎಂದು ಪ್ರಶ್ನಿಸಿದರು..

ಹಿಂದುತ್ವದ ರಾಜಕಾರಣ ಆರಂಭವಾದ ನಂತರ ಈ ರಾಜಕೀಯ ದುರುದ್ದೇಶ ಹೆಚ್ಚುತ್ತಾ ಇದೆ. ನಮ್ಮ ಮಕ್ಕಳಿಗೆ ಪೆನ್ನು ಪುಸ್ತಕ ಕೊಡುವ ಬದಲು ತಲವಾರ್ ಕೊಡಬೇಡಿ.. ಬಡವರ ಮನೆ ಮಕ್ಕಳು ಬೀದಿಗೆ ಬರಬೇಡಿ ಎಂದು ಮನವಿ ಮಾಡಿದರು.

ಕೋಮು ಗಲಭೆ ಶುರುವಾದರೆ ಕೃಷಿ ಭೂಮಿಯಲ್ಲಿ ಯುವಕರು ಇರುವುದಿಲ್ಲ.. ಯಾವುದೇ ಕಾರಣಕ್ಕೂ ಮತೀಯವಾದಿಗಳಿಗೆ ಅವಕಾಶ ಕೊಡಬೇಡಿ ಎಂದರು.

ವೇದಿಕೆಯಲ್ಲಿ ಎಂ.ಜಿ.ಹೆಗಡೆ, ಸುಧೀರ್ ಕುಮಾರ್ ಮುರೋಳಿ, ಲೇಖಕಿ ಸೌಮ್ಯ ಕೋಡೂರು, ಕವಿ ರಾಜೇಂದ್ರ ಪ್ರಸಾದ್, ಹೋರಾಟಗಾರ್ತಿಯರಾದ ಸಿ.ಕುಮಾರಿ, ಪೂರ್ಣಿಮಾ, ತೇಜ ಯಾಲಕ್ಕಯ್ಯ ಮಾತನಾಡಿದರು. ದಸಸಂ ಸಂಚಾಲಕರಾದ ಗುರುಪ್ರಸಾದ್ ಕೆರಗೋಡುರವರು ಅಧ್ಯಕ್ಷತೆ ವಹಿಸಿದ್ದರು. ಎನ್.ನಾಗೇಶ್ ಸ್ವಾಗತಿಸಿದರು. ಡಾ.ಬಿ.ಸಿ.ಬಸವರಾಜು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ರಮೇಶ್ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಹಾಗೂ ಕೆ.ವಿ.ಶಂಕರಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಂಡ್ಯನಗರದ ಸಂಜಯ ವೃತ್ತದಲ್ಲಿ ತ್ರಿವರ್ಣ ಧ್ವಜ ಹಾಗೂ ಕನ್ನಡ ಧ್ವಜಗಳನ್ನು ಹಿಡಿದು ನೂರಾರು ಜನರು ಮಾನವ ಸರಪಳಿ ನಿರ್ಮಿಸಿ ಸೌಹಾರ್ದತೆಯ ಸಂದೇಶ ಸಾರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ