ಕರ್ನಾಟಕ ಮಾದರ ಮಹಾಸಭಾದ ಮಂಡ್ಯ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಯುವ ಮುಖಂಡ ಅಂಬೂಜಿ ಹುಲಿವಾನ ಅವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಗಿದೆ.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಬುಧವಾರ ಮಂಡ್ಯ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಂಡ್ಯ ತಾಲ್ಲೂಕು ಅಧ್ಯಕ್ಷರಾಗಿ ಅಂಬೂಜಿ, ಉಪಾಧ್ಯಕ್ಷರಾಗಿ ಬಸರಾಳು ಶ್ರೀನಿವಾಸ, ಕಾರ್ಯದರ್ಶಿ ಚಂದ್ರಶೇಖರ್ ಮುದಗಂದೂರು, ಖಜಾಂಚಿಯಾಗಿ ಸ್ವಾಮಿ ಎಲೆಚಾಕನಹಳ್ಳಿ ಎಲೆಚಾಕನಹಳ್ಳಿ ಅವರು ಆಯ್ಕೆಯಾದರು.
ತಾಲ್ಲೂಕು ಸಮಿತಿ ಸದಸ್ಯರಾಗಿ ಸಂಗೀತ ಮಧು ಬಿ.ಹಟ್ಟಣ, ನಾಗರಾಜ್ ಉಮ್ಮಡಹಳ್ಳಿ, ಶಂಭು ಮೊತ್ತಹಳ್ಳಿ, ವಕೀಲ ಸತೀಶ್ , ಶಿವಬೋರ ಹಂಪಾಪುರ ಆಯ್ಕೆಯಾದವರು. ಗೌರವ ವಿಶೇಷ ಆಹ್ವಾನಿತ ಸದಸ್ಯರಾಗಿ ತಾ.ಪಂ.ಮಾಜಿ ಸದಸ್ಯರಾದ ಪುಟ್ಟಸ್ವಾಮಿ, ಸರೋಜಮ್ಮ, ಮುಖಂಡರಾದ ಡಿ.ರಾಜು, ಶಿವಕುಮಾರ್ ಅವರು ಬಿಳಿಯಯ್ಯ ಚಿಕ್ಕಬಳ್ಳಿ ನೇಮಕಗೊಂಡಿದ್ದಾರೆ.
ಸದಸ್ಯತ್ವ ನೋಂದಣಿ ಅಭಿಯಾನ
ಇದೇ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕು, ಸೇರಿದಂತೆ ಮಂಡ್ಯ ಜಿಲ್ಲಾದಾದ್ಯಂತ ಆಯಾ ತಾಲ್ಲೂಕಿನ ಸಮುದಾಯದ ಕ್ರಿಯಶೀಲ ಯುವಕ – ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭಾದ ಸದಸ್ಯತ್ವ ಪಡೆಯುವುದರೊಂದಿಗೆ, ಸಮುದಾಯದ ಜನರನ್ನು ಹೆಚ್ಚು ಹೆಚ್ಚಾಗಿ ನೋಂದಾಯಿಸಲು ಸದಸ್ಯತ್ವ ನೋಂದಣಿ ಅಭಿಯಾನ ನಡೆಸಬೇಕೆಂದು ಎನ್.ಆರ್.ಚಂದ್ರಶೇಖರ್ ತಿಳಿಸಿದರು.
ಈ ಸಭೆಯಲ್ಲಿ ಸಮುದಾಯದ ಮುಖಂಡರಾದ ವಕೀಲ ಕೆಂಪಯ್ಯ, ರಾಜು ಮುದಗಂದೂರು, ಎನ್.ಶೇಖರ್, ಜಗದೀಶ್ ಹನಿಯಂಬಾಡಿ, ಪ್ರಸನ್ನ ಮಾರಗೌಡನಹಳ್ಳಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




