Thursday, June 13, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಕದಲೂರು ಉದಯ್ ಪರ ನಟ ದರ್ಶನ್‌ ಚುನಾವಣಾ ಪ್ರಚಾರ

ವರದಿ : ಪ್ರಭು ವಿ ಎಸ್

ಚಲನಚಿತ್ರ ನಟ ದರ್ಶನ್‌ತೂಗುದೀಪ್ ಗುರುವಾರ ದಿನವಿಡೀ ಮದ್ದೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್‌ಶೋ ಮೂಲಕ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್ ಪರ ಚುನಾವಣಾ ಪ್ರಚಾರ ನಡೆಸಿ ಕಣ ರಂಗೇರಿಸಿದರು

ಮದ್ದೂರು ವಿಧಾನಸಭಾ ಕ್ಷೇತ್ರದ ಮಲ್ಲನಕುಪ್ಪೆ, ಕೆಸ್ತೂರು, ತೊರೆಶೆಟ್ಟಹಳ್ಳಿ, ತುಮಕೂರು ಅಡ್ಡರಸ್ತೆ, ಸೋಮನಹಳ್ಳಿ, ಕೆ. ಹೊನ್ನಲಗೆರೆ, ಕೊಕ್ಕರೆಬೆಳ್ಳೂರು, ಭಾರತಿನಗರ, ಮದ್ದೂರು ಪಟ್ಟಣದ, ಶಿವಪುರ, ಚಾಮನಹಳ್ಳಿ, ಬೆಸಗರಹಳ್ಳಿ ಅಡ್ಡರಸ್ತೆ, ಬೆಸಗರಹಳ್ಳಿ ಇನ್ನಿತರೆಡೆ ಬಿರುಸಿನ ಪ್ರಚಾರ ಕೈಗೊಂಡರು.

ರೋಡ್‌ಶೋ ವೇಳೆ ಮಾತನಾಡಿದ ನಟ ದರ್ಶನ್ ತಂದೆ ತಾಯಿಗೆ ನೀಡುವ ಗೌರವಕ್ಕಿಂತ ಎರಡುಪಟ್ಟು ಗೌರವವನ್ನು ಸ್ನೇಹಿತರಿಗೆ ನೀಡುವ ತಾವು ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿ ಅಲ್ಲವೆಂದು ಸ್ಪಷ್ಟನೆ ನೀಡಿದರು.
ಎಲ್ಲಾ ಪಕ್ಷದಲ್ಲಿಯೂ ತಮಗೆ ಅತ್ಯುತ್ತಮ ಸ್ನೇಹಿತರಿದ್ದು ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್ ಮತ್ತು ತಮ್ಮ ನಡುವಿನ ಸ್ನೇಹ ತುಂಬಾ ವರ್ಷಗಳದ್ದೆಂದ ಅವರು ಪಕ್ಷಕ್ಕಿಂತ ಮಿಗಿಲಾಗಿ ಸ್ನೇಹಕ್ಕೆ ಸೋತು ಉದಯ್ ಅವರ ಪರ ಮತಯಾಚಿಸಲು ಆಗಮಿಸಿರುವುದಾಗಿ ಹೇಳಿದರು.

ಜಾಲ ತಾಣಗಳಲ್ಲಿ ಕೆಲವರು ತಾಯಿ, ಮಗನ (ಸಂಸದೆ ಸುಮಲತಾಅಂಬರೀಷ್) ಸಂಬಂಧ ಕೆಡಿಸುವ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದು ಇದು ನಿರುದ್ಯೋಗಿಗಳ ಕಾರ್ಯವೆಂದು ಭಾವಿಸಿದ್ದು ತಾಯಿ ಮಗನ ಸಂಬಂಧವನ್ನು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲವೆಂದರು.

ಕೆ.ಎಂ. ಉದಯ್ ಅವರ ಸಾಮಾಜಿಕ ಮತ್ತು ಬಡಜನ ಪರವಾದ ಕಾಳಜಿ ತಮಗೆ ತುಂಬಾ ಹಿಡಿಸಿದ್ದು ಇಂತಹ ವ್ಯಕ್ತಿಯನ್ನು ಅಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಮೂಲಕ ಮತ್ತಷ್ಟು ಸೇವೆಗೆ ಅವಕಾಶ ಕಲ್ಪಿಸುವಂತೆ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಈ ವೇಳೆ ಅಭ್ಯರ್ಥಿ ಕೆ.ಎಂ. ಉದಯ್, ಶಾಸಕರಾದ ಮಧು.ಜಿ.ಮಾದೇಗೌಡ, ದಿನೇಶ್‌ಗೂಳೀಗೌಡ, ಮಾಜಿ ಶಾಸಕ ಬಿ. ರಾಮಕೃಷ್ಣ, ತಾ.ಪಂ. ಮಾಜಿ ಸದಸ್ಯ ಚಲುವರಾಜು, ಸೋಮನಹಳ್ಳಿ ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ, ಗ್ರಾ.ಪಂ. ಸದಸ್ಯ ಸಿ.ಟಿ. ಶಂಕರ್, ಮುಖಂಡರಾದ ವಿನಯ್‌ರಾಮಕೃಷ್ಣ, ಅಪ್ಪಾಜೀಗೌಡ, ಸಿಪಾಯಿ ಶ್ರೀನಿವಾಸ್, ಕೆ.ಆರ್. ಮಹೇಶ್, ಅಭಿಷೇಕ್, ನವೀನ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!