ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಪ.ಜಾ ಒಳಮೀಸಲಾತಿ ವರ್ಗೀಕರಣದ ಸಮೀಕ್ಷೆಯು ರಾಜ್ಯದಾದ್ಯಂತ ಮೇ ತಿಂಗಳಿನಲ್ಲಿ ನಡೆಯಲಿದೆ, ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿಮೇ 5 ರಿಂದ 17 ರವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದ್ದು, ಈ ಸಂದರ್ಭದಲ್ಲಿ ಎಡಗೈ ಸಮುದಾಯ (ಮಾದಿಗ ಸಂಬಂಧಿತ ಜಾತಿಗಳು) ಕಡ್ಡಾಯವಾಗಿ ‘ಮಾದಿಗ’ ಎಂದೇ ಬರೆಸಬೇಕೆಂದು ಅಖಿಲ ಕರ್ನಾಟಕ ಡಾ ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾ ಅಧ್ಯಕ್ಷ ಎನ್ ಆರ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಹಾಗೂ ವಿವಿಧ ಮಾದಿಗ ಸಂಘಟನೆಗಳ ನಿರಂತರ ಹೋರಾಟದ ಪ್ರತಿಫಲವಾಗಿ ಆಗಸ್ಟ್ 1,2024 ರಂದು ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ, ದತ್ತಾಂಶಗಳನ್ನು ಆಧರಿಸಿ ಒಳಮೀಸಲಾತಿ ಜಾರಿ ಮಾಡಲು ತೀರ್ಪು ನೀಡಿದೆ. ಅದರಂತೆ ಸಮೀಕ್ಷೆ ನಡೆಯಲಿದ್ದು, ಎಡಗೈ ಸಮುದಾಯದ ಜನರು ಸರಿಯಾದ ಮಾಹಿತಿ ನೀಡಬೇಕೆಂದರು.
ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ವಿಚಾರಣಾ ಆಯೋಗವನ್ನು ನೇಮಕ ಮಾಡಿದ್ದು, ಈ ಆಯೋಗವು ಮೇ ತಿಂಗಳ 5 ರಿಂದ 17 ರವರಿಗೆ ರಾಜ್ಯಾದ್ಯಂತ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಲಿದದೆ, ಮೇ19 ರಿಂದ 21 ರವರಿಗೆ ಬೂತ್ ಮಟ್ಟದ ತಾತ್ಕಾಲಿಕ ಕೆಂದ್ರಗಳಲ್ಲಿ (ನೀವೇ ಹೋಗಿ ಹೇಳಿ ಬರೆಸಬೇಕು) 19 ರಿಂದ 23 ರವರಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಹಾಗೂ ಕೈ ಬಿಟ್ಟವರು. ಪುನಃ ಆನ್ ಲೈನ್ ಮೂಲಕ ಮಾಹಿತಿ ನೀಡಬೇಕು. ಸಮೀಕ್ಷೆ ಯಲ್ಲಿ, ಮೂಲ ಜಾತಿ”, ಶಿಕ್ಷಣ, ಉದ್ಯೋಗ ಮುಂತಾದ ಅನೇಕ ಮಾಹಿತಿಗಳುನ್ನು ಇದೇ ಮೊದಲ ಬಾರಿಗೆ ಡಿಜಿಟಲ್ ಸರ್ವೇ ನಡೆಸುತ್ತಿದೆ ಎಂದರು.
ಸಮೀಕ್ಷೆ ಸಂದರ್ಭದಲ್ಲಿ ಆಧಾರ್ ಕಾರ್ಡ್ ,ಪಡಿತರ ಕಾರ್ಡ್, ಜಾತಿ ದೃಢೀಕರಣ ಪತ್ರ, ಆದಿ ಕರ್ನಾಟಕ, ಆದಿ ದ್ರಾವಿಡ, ಜಾತಿ ದೃಢೀಕರಣ ಪತ್ರವನ್ನು ಮಾದಿಗ ಜನಾಂಗ ಹಾಗೂ ಹೊಲೆಯ ಜನಾಂಗದ ಇಬ್ಬರು ತೆಗೆದು ಕೊಳ್ಳುತ್ತಿರುವುದರಿಂದ ಗೊಂದಲ ನಿವಾರಣೆಗಾಗಿ ಜಾತಿ ದೃಢೀಕರಣ ಪತ್ರ ಯಾವುದೇ ಆಗಿರಲಿ, ಶಾಲಾ ದಾಖಲಾತಿ ಯಾವುದೇ ಆಗಿರಲಿ, ಈ ಮೂಲ ಜಾತಿ ಗಣತಿ ಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಎಡಗೈ ಎಂದು ಹೇಳದೆ “ಮಾದಿಗ 61″ಎಂದು ಹೇಳಿ, ಗಣತಿದಾರರಿಗೆ ಮಾಹಿತಿ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




