Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಡಿವಾಳ ಸಮಾಜದ ಸಮುದಾಯಭವನ ಅನುದಾನಕ್ಕೆ ಮನವಿ

ನಗರದ ತಾವರಗೆರೆ ಬಡಾವಣೆಯಲ್ಲಿ ನಿರ್ಮಾಣ ವಾಗುತ್ತಿರುವ ಜಿಲ್ಲಾ ಮಡಿವಾಳ ಸಮಾಜದ ಸಮುದಾಯಭವನಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವಂತೆ ಕೋರಿ ರೇಷ್ಮೆ ಮತ್ತು ಕ್ರೀಡಾ ಖಾತೆ ಸಚಿವ ಡಾ.ಕೆ.ಸಿ,ನಾರಾಯಣಗೌಡ ಅವರಿಗೆ ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಮನವಿ ನೀಡಿದರು.

ನಗರದಲ್ಲಿರುವ ಜಿಲ್ಲಾ ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ರೇಷ್ಮೆ ಮತ್ತು ಕ್ರೀಡಾ ಖಾತೆ ಸಚಿವ ಡಾ.ಕೆ.ಸಿ,ನಾರಾಯಣಗೌಡ ಅವರು ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು.

ಸಮುದಾಯದ ಭವನವು ಕಟ್ಟಡ ಕಾಮಗಾರಿಯಾಗಿ ಆರ್ಥಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ, ಸಚಿವರ ಅನುದಾನ ಮತ್ತು ಸರ್ಕಾರ ಅನುದಾನ ನೀಡಿ ಆರ್ಥಿಕ ನೆರವಿನೊಂದಿಗೆ ಸಮುದಾಯ ಅಭಿವೃದ್ಧಿ ಬಲ ನೀಡಿ ಎಂದು ಕೋರಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಮಡಿವಾಳ ಸಮಾಜವನ್ನು ಸರಕಾರ ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆಗೊಳಿಸಬೇಕು, ದೇಶದ 17 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜವನ್ನು ಕಳೆದ 60 ವ‍ರ್ಷಗಳಿಂದ ಎಸ್ಸಿಗೆ ಸೇರಿಸಲಾಗಿದೆ. ಹಲವು ವರ್ಷಗಳಿಂದ ಮಡಿವಾಳ ಸಮಾಜದ ಬೃಹತ್ ಸಮಾವೇಶ ಆಯೋಜಿಸಿ ಎಸ್ಸಿಗೆ ಸೇರಿಸಿ ಎಂದು ರಾಜ್ಯ ಸರಕಾರಕ್ಕೆ ಒತ್ತಡ ಹೇರಲಾಗಿದೆ ಎಂದು ತಿಳಿಸಿದರು.

ಅನೇಕ ಗ್ರಾಮಗಳಲ್ಲಿರುವ ಮಡಿವಾಳ ಸಮಾಜದವರಿಗೆ ಸರಕಾರಿ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ, ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಮೂಲೆ ಮೂಲೆಯಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸ ಜಾರಿಯಲ್ಲಿದೆ. 27 ಜಿಲ್ಲೆಗಳ 1500 ಕಡೆಗಳಲ್ಲಿ ಮಾಚಿದೇವರ ಜಯಂತಿ ಆಚರಣೆ ಮಾಡಲಾಗಿದೆ. ಸಮುದಾಯ ಭವನಗಳ ನಿರ್ಮಾಣಕ್ಕೆ ರಾಜ್ಯ ಸರಕಾರ 8 ಕೋಟಿ ಅನುದಾನ ನೀಡಿದ್ದರೂ ಸಫಲತೆ ಕಾಣದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮದ್ದೂರು ಸ್ವಾಮಿ, ಮಡಿವಾಳ ಸಮುದಾಯ ಸ್ಥಳೀಯ ಮುಖಂಡರುಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ