Sunday, November 22, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಹ್ಯೂಮನ್ ರಿಸೋರ್ಸ್ ಸರ್ವೀಸ್ ಪ್ರೊವೈಡರ್ಸ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮಹಾಲಿಂಗೇಗೌಡ ಮುದ್ದನಘಟ್ಟ ಆಯ್ಕೆ

ರಾಜ್ಯ, ಕೇಂದ್ರ ಸರ್ಕಾರಿ, ಸಾರ್ವಜನಿಕ, ಅರೆ ಸಾರ್ವಜನಿಕ, ಐಟಿ,ಬಿಟಿ. ಎಂ.ಎನ್.ಸಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಒಳಗೊಂಡಂತೆ ಖಾಸಗಿ ವಲಯದ ಎಲ್ಲ ಉದ್ಯಮಗಳಿಗೆ ಎಲ್ಲಾ ವೃಂದದ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಮುಖಾಂತರ ಒದಗಿಸುತ್ತಿರುವ ವಲಯದಲ್ಲಿ ಇದೀಗ “ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ರಾಜ್ಯ ಮಟ್ಟದ ಸಂಘ “ಅಸ್ಥಿತ್ವಕ್ಕೆ ಬಂದಿದ್ದು, ಇದರ ಅಧ್ಯಕ್ಷರಾಗಿ ಮಹಾಲಿಂಗೇಗೌಡ ಮುದ್ದನಘಟ್ಟ ಆಯ್ಕೆಯಾಗಿದ್ದಾರೆ.

ವ್ಯವಹರಿಕವಾಗಿ ಉದ್ಯಮ ಬೆಳವಣಿಗೆ ಅಭಿರುದ್ಧಿ, ಹಿತಾಸಕ್ತಿ ವಿವಿದ ದ್ಯೇಯೋದ್ದೇಶ, ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮತ್ತು ಏಜೆನ್ಸಿ ಮುಖಾಂತರ ಕೆಲಸ ನಿರ್ವಹಿಸುತಿರುವ ಹೊರಗುತ್ತಿಗೆ ಮತ್ತು ನೇರ ಉದ್ಯೋಗಿಗಳ ವೆಲ್ಫೇರ್ (ಕಲ್ಯಾಣ) ಸೇರಿದಂತೆ ರಾಜ್ಯಕೆ ಸೇರಿದ ಅಸಂಘಟಿತ ಗುತ್ತಿಗೆದಾರ /ಏಜೆನ್ಸಿ ಸಂಸ್ಥೆಗಳ / ಮಾಲೀಕರುಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಸಂಘ ಹೊಂದಿದೆ ಎಂದು ನೂತನ ಅಧ್ಯಕ್ಷ ಮಹಲಿಂಗೇಗೌಡ ತಿಳಿಸಿದ್ದಾರೆ.

ರಾಜ್ಯ ,ಹೊರರಾಜ್ಯ, ವಿದೇಶಗಳು ,ಸೇರಿದಂತೆ ಈ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಅಧಿಕ ಜನರಿಗೆ ಹೊರಗುತ್ತಿಗೆ ಮೂಲಕ ,ಲಕ್ಷಾಂತರ ಜನರಿಗೆ ನೇರ ಉದ್ಯೋಗ ಒದಗಿಸಿ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಹಾಗು ರಾಜ್ಯ ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ನಿರುದ್ಯೋಗಿ ಗಳಿಗೆ ಉದ್ಯೋಗ ನೀಡುತ್ತಿರುವ ಇಂತಹ ಮಹತ್ವದ ಸಂಸ್ಥೆಗೆ ಮೊದಲ ಅಧ್ಯಕ್ಷರಾಗಿ ಮಂಡ್ಯ ಮೂಲದ ಬೆಂಗಳೂರಿನ ಮಹಾಲಿಂಗಪ್ಪ (ಮಹಾಲಿಂಗೇಗೌಡ ಮುದ್ದನಘಟ್ಟ) ಆಯ್ಕೆಯಾಗಿದ್ದಾರೆ.

ರಾಜ್ಯಕ್ಕೆ ಸೇರಿದ ಗುತ್ತಿಗೆದಾರ ಏಜೆನ್ಸಿಗಳು, ಸಂಸ್ಥೆಗಳ ಮಾಲೀಕರುಗಳನ್ನೊಳಗೊಂಡ ನೂತನ ಸಂಘದಲ್ಲಿ ಉಪಾಧ್ಯಕ್ಷರಾಗಿ ಶಿವಮೊಗ್ಗದ ಸುರೇಶ್ ಕೆ ಬಾಳೆಗುಂಡಿ, ಮೈಸೂರಿನ ಎಂ ನಾಗರಾಜು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ರಾಘವೇಂದ್ರ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ದಾವಣಗೆರೆಯ ಬಿ ಎಸ್ ರಾಜಶೇಖರ್, ಜಂಟಿ ಕಾರ್ಯದರ್ಶಿಗಳಾಗಿ ಗುಲ್ಬರ್ಗದ ಯಲ್ಲಪ್ಪ ಬಿ ಕಂದಕೂರ, ಬೆಂಗಳೂರಿನ ದಯಾನಂದ ಟಿ ಆರ್, ಸಂಘಟನಾ ಕಾರ್ಯದರ್ಶಿಗಳಾಗಿ ಬೆಂಗಳೂರಿನ ಶಿವಕುಮಾರ್, ರಾಜಪ್ಪ ಟಿ, ಗೋಪಾಲ ಡಿ, ಬಾಗಲಕೋಟೆಯ ಗಣಪತಿ ಬಿ ಹೋಟಾಕರ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಂಗಳೂರಿನ ಅಶ್ವಿನ್ ಕುಮಾರ್ ಎ, ಕೆ ಭದ್ರೇಗೌಡ, ಗಂಗಾಧರ ಟಿ ಎನ್, ನಾಗಪ್ಪ ,ಪದ್ಮನಾಭ ರೆಡ್ಡಿ, ರವಿ ಶಂಕರ್ ಎಸ್, ವಿಜಯಪುರದ ಭುಟಾಲೆಪ್ಪ ಮನ್ನೂರ, ಧಾರವಾಡ ದ ನಾಗಪ್ಪ ಗುರುಬಸಪ್ಪ ಬಿದರಿ ,ಚಿತ್ರದುರ್ಗದ ಚೇತನ್ ಕುಮಾರ್ ಆರ್, ಶಿವಮೊಗ್ಗದ ಗಿರಿಜ, ಮೈಸೂರಿನ ಶಿವಣ್ಣ, ಶಂಕರೇಗೌಡ ಕೆ ಎಸ್,ಎಂ ಶಶಿಕಾಂತ ರಾಮನಗರದ ಪುಟ್ಟ ಸ್ವಾಮಿ ಹೆಚ್ ಟಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಗಟ್ಟ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ