Saturday, October 19, 2024

ಪ್ರಾಯೋಗಿಕ ಆವೃತ್ತಿ

ಸಚಿವಾಲಯದ ಮಹಡಿಯಿಂದ ಜಿಗಿದ ಮಹಾರಾಷ್ಟ್ರ ವಿಧಾನಸಭೆ ಉಪ ಸಭಾಧ್ಯಕ್ಷ, ಮೂವರು ಶಾಸಕರು!

ಧನಗರ್ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದನ್ನು ವಿರೋಧಿಸಿ ಮಹಾರಾಷ್ಟ್ರ ವಿಧಾನಸಭೆಯ ಉಪ ಸಭಾಧ್ಯಕ್ಷ ನರಹರಿ ಝಿರ್ವಾಲ್ ಮತ್ತು ಇತರ ಮೂವರು ಬಿಜೆಪಿ ಶಾಸಕರು ಸೆಕ್ರೆಟರಿಯೇಟ್ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿರುವ ನಾಟಕೀಯ ಘಟನೆ ಮುಂಬೈನಲ್ಲಿ ನಡೆದಿದೆ. ಅವರ ಕಟ್ಟಡದ ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿರುವ ಬಲೆ ಮೇಲೆ ಬಿದ್ದುದ್ದು ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರಿದಯಾಗಿದೆ.

ಮಹಾರಾಷ್ಟ್ರದಲ್ಲಿ ಧನಗ‌ರ್ ಸಮುದಾಯವು ಪ್ರಸ್ತುತ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿದೆ. ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ಬುಡಕಟ್ಟು ಸಮುದಾಯದ ಕೆಲವು ಶಾಸಕರು ಒತ್ತಾಯಿಸಿದ್ದಾರೆ. ಅಲ್ಲದೆ, ಸೊಲ್ಲಾಪುರ ಜಿಲ್ಲೆಯ ಪಂಢರಪುರದಲ್ಲಿ ಬುಡಕಟ್ಟು ಸಮುದಾಯವು ಧರಣಿ ನಡೆಸುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸರ್ಕಾರ ಹೇಳಿಕೆಕೊಂಡಿದೆ.

“>

 

ಹೀಗಾಗಿ, ಧನಗ‌ರ್ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಎನ್‌ಸಿಪಿ (ಅಜಿತ್ ಬಣ) ಶಾಸಕ, ಉಪ ಸಭಾಧ್ಯಕ್ಷ ಝಿರ್ವಾಲ್ ಹಾಗೂ ಮೂವರು ಬಿಜೆಪಿ ಸಂಸದರು ಸೆಕ್ರೇಟರಿಯೇಟ್ ಕಟ್ಟಡಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಗಮನ ಸೆಳೆಯಲು ಕಟ್ಟಡದಿಂದ ಆತ್ಮಹತ್ಯೆಯ ನಾಟಕವಾಡಿದ್ದಾರೆ. ಅವರು, ಕಟ್ಟಡದ ಮೊದಲ ಮಹಡಿಗೆ 2018ರಲ್ಲಿ ನಿರ್ಮಿಸಲಾಗಿದ್ದ ಬಲೆ ಮೇಲೆ ಸುರಕ್ಷಿತವಾಗಿ ಬಿದ್ದಿದ್ದಾರೆಟಿಇಟ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!