Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರದಲ್ಲಿ ಕನ್ನಡ ನಾಮಪಲಕ ಕಡ್ಡಾಯಗೊಳಿಸಿ ; ಕನ್ನಡ ಸೇನೆ ಆಗ್ರಹ

ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯುತ್ತಿರುವ ಈ ಸಂದರ್ಭದಲ್ಲಿ ತಕ್ಷಣ ಕಣ್ಣ ಮಂಡ್ಯ ನಗರದಲ್ಲಿರುವ ನಾಮಪಲಕಗಳನ್ನು ಕನ್ನಡ ಕಡ್ಡಾಯಗೊಳಿಸಬೇಕೆಂದು ಕನ್ನಡ ಸೇನೆ ರಾಜ್ಯಾಧ್ಯಕ್ಷರಾದ ಕೆ.ಆರ್. ಕುಮಾರ್,  ಮಂಡ್ಯ ನಗರಸಭಾ ಅಧ್ಯಕ್ಷರಿಗೆ ಆಗ್ರಹ ಮಾಡಿದರು.

ಮಂಡ್ಯ ನಗರಸಭೆಯ ಅಧ್ಯಕ್ಷರ ಕಚೇರಿಗೆ ಭೇಟಿ ನೀಡಿದ ರಾಜ್ಯ ಅಧ್ಯಕ್ಷ ಕೆ.ಕುಮಾರ್ ಅವರು, ತಕ್ಷಣ ನಾಮಫಲಕಗಳನ್ನು ಬದಲಾವಣೆ ಮಾಡಬೇಕು. ಮಂಡ್ಯದಲ್ಲಿ 40ರಷ್ಟು ಮಾತ್ರ ನಾವು ಫಲಕ ಬದಲಾವಣೆ ಆಗಿರುವುದು. ಅತಿ ಹೆಚ್ಚು ಕನ್ನಡ ಮಾತಾಡುವ ಮಂಡ್ಯ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಆದರೆ ಇನ್ನು ಗಡಿ ಭಾಗದ ಕನ್ನಡಿಗರ ಗತಿ ಏನು ಪ್ರಶ್ನಿಸಿದರು. ತತಕ್ಷಣ ನಗರಸಭೆ ಆಡಳಿತ ಮಂಡಳಿ, ಇತ್ತ ಗಮನ ಹರಿಸಬೇಕು. ಒಂದು ವೇಳೆ ನಾಮಫಲಕ ಬದಲಾವಣೆಯಾಗದಿದ್ದರೆ ಕನ್ನಡ ಸೇನೆ ಕರ್ನಾಟಕದ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಇದಕ್ಕೆ ಉತ್ತರಿಸಿದ ಮಂಡ್ಯ ನಗರಸಭಾ ಅಧ್ಯಕ್ಷರಾದ ನಾಗೇಶ್ ಅವರು. ತಕ್ಷಣ ಸಭೆಯನ್ನು ಕರೆದು ಆದೇಶ ಮಾಡಲಾಗುವುದು ಆದೇಶ ಪಾಲನೆ ಮಾಡದಿದ್ದರೆ ವರ್ತಕರ ಲೈಸನ್ಸ್ ರದ್ದು ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಕಳೆದ ಐದಾರು ತಿಂಗಳಿಂದ ಮಂಡ್ಯ ಜಿಲ್ಲೆ ಕನ್ನಡ ಸೇನೆ ಕರ್ನಾಟಕದ ವತಿಯಿಂದ ಎಂಟು ಬಾರಿ ಪ್ರತಿಭಟನೆ ನಡೆಸಿದರೂ ಕೇವಲ 40 ರಷ್ಟು ನಾಮಪಲಕ ಬದಲಾವಣೆ ಆಗಿರುವುದು ಬೇಸರದ ವಿಷಯ, ತಕ್ಷಣ ಜಿಲ್ಲಾ ಆಡಳಿತ ಮತ್ತು ನಗರಸಭೆ ಆಡಳಿತ  ಆದೇಶ ಪಾಲನೆ ಮಾಡದೆ ಇರುವ ವರ್ತಕರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡ್ಯ ನಗರಸಭಾ ಮಾಜಿ ಅಧ್ಯಕ್ಷ ಎಚ್ ಎಸ್ ಮಂಜು. ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್ ವಿ ನಟರಾಜ್. ಕನ್ನಡ ಸೇನೆಯ ರಾಜ್ಯ ಮುಖಂಡ ಹನುಮಂತಪ್ಪ. ರಾಜ್ಯ ಸಂಚಾಲಕ  ಜಿ ಮಹಾಂತಪ್ಪ, ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮನಾಯಕನಹಳ್ಳಿ ಮಂಜು, ಮಂಡ್ಯ ತಾಲೂಕು ಅಧ್ಯಕ್ಷ ಸತೀಶ್. ಇದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ